ಮೋದಿ ಸಮಾವೇಶಕ್ಕೆ ನಾನು ಬರುವುದಿಲ್ಲ: ಬಿಎಸ್‌ವೈ ಆಹ್ವಾನ ತಿರಸ್ಕರಿಸಿ ಶ್ರೀನಿವಾಸ ಪ್ರಸಾದ್
ನಾನು ಈಗಾಗಲೇ ಬಿಜೆಪಿಯಿಂದಲೇ ನಿವೃತ್ತಿ ಆಗಿದ್ದೇನೆ. ಹೋದ ತಿಂಗಳು ದೊಡ್ಡ ಕಾರ್ಯಕ್ರಮ ಮಾಡಿ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದೇನೆ. ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಬಹಳಷ್ಟು ಚುನಾವಣೆ ಎದುರಿಸಿರುವ ನನಗೆ ಸದ್ಯ ಆರೋಗ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ. ಮನೆಯಿಂದ ಹೊರಗೆ ಹೋಗದ ಪರಿಸ್ಥಿತಿಯಲ್ಲಿ ನಾನಿಂದು, ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಬಿಎಸ್‌ವೈ ಭೇಟಿಯಾಗಿದ್ದು ಖುಷಿ ನೀಡಿದೆ ಎಂದಿದ್ದಾರೆ.