ಸಮಸ್ಯೆಗಳನ್ನ ಸಿಎಂ‌ ಮುಂದೆ ಪ್ರಸ್ತಾಪಿಸುತ್ತೇನೆ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಸೋಮವಾರ, 31 ಜುಲೈ 2023 (17:55 IST)
ಇಂದು ಸಾರಿಗೆ ಸಿಬ್ಬಂದಿಗಳು ಸೇರಿದಂತೆ ಹಲವು ಸಂಘಟನೆಗಳ ಜೊತೆ ಸಭೆ ನಡೆಸಿದ ಬಳಿಕ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಪ್ರತಿಕ್ರಿಯಿಸಿದ್ದು,ಕಳೆದವಾರ ಖಾಸಗಿ ಸಾರಿಗೆ ಸಂಘಟನೆಗಳಿಗೆ   ಸಭೆ ನಡೆಸುವ ಭರವಸೆ ಕೊಟ್ಟಿದ್ಧೆ,ಇವತ್ತು ಸಭೆಯನ್ನ ನಡೆಸಿದ್ದೇನೆ.ಎಲ್ಲಾ ಸಂಘಟನೆಗಳು ಬಂದಿದ್ದವು.ಕೆಲವು ವಿಚಾರಗಳು ಪ್ರಸ್ತಾಪ ವಾಗಿದೆ.ಒಲಾ ಊಬರ್ ರ‌್ಯಾಪಿಡೋ ಬಗ್ಗೆಯೂ ಚರ್ಚೆಯಾಗಿದೆ .ಅದು ಈಗಾಗಲೇ ನ್ಯಾಯಾಲಯದಲ್ಲಿದೆ .ಕೆಲವು ಕಾನೂನು ಬಾಹಿರ ಆ್ಯಪ್ ಗಳ ಬಗ್ಗೆ ಯೂ ಪ್ರಸ್ತಾಪಿಸಿದ್ದಾರೆ .ಏರ್ ಪೋರ್ಟ್ ನಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು‌ ಹೇಳಿದ್ದಾರೆ.ಶಕ್ತಿ ಯೋಜನೆ ಯಿಂದ ಆದಾಯ ಇಳಿಕೆಯಾಗಿದೆ ಎಂದಿದ್ದಾರೆ.ಆಟೋ ಪರ್ಮಿಟ್ ವಿಸ್ತರಿಸಲು ಮನವಿ ಮಾಡಿದ್ದಾರೆ.ಈಗ ಆಟೊ ಗಳಿಗೆ ಬಿಬಿಎಂಪಿ ವ್ಯಾಪ್ತಿಯ ವರ್ಷ ಗೆ  ಲಿಮಿಟ್ ಇದೆ ಇದನ್ನ  ಮುಂದಿನ ದಿನಗಳಲ್ಲಿ ನಗರ ಜಿಲ್ಲೆ ಎಂದು ಮಾಡ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
 
ಮಕ್ಕಳಿಗೆ ವಿದ್ಯಾರ್ಥಿ ವೇತನದ ವಿಚಾರ ಪ್ರಸ್ತಾಪಿಸಲಾಗಿದೆ.ಇನ್ಶುರೆನ್ಸ್ ಗಳನ್ನ ಹೃದಯಾಗಾತಕ್ಕೂ ವಿಸ್ತಿರಿಸಲು ಹೇಳಿದ್ದಾರೆ.ಸರ್ಕಾರದಿಂದ ಆ್ಯಫ್ ಮಾಡಿ ಎಂದು ಖಾಸಗಿಯವರು ಹೇಳಿದ್ದಾರೆ.ಮೆಟ್ರೋ ನಿಲ್ದಾಣ ಗಳಲ್ಲಿ ಆಟೋ ಸ್ಟ್ಯಾಂಡ್ ಮಾಡುವಂತೆ ಮನವಿ ಮಾಡಿದ್ದಾರೆ.ಹಲವಾರು ಸಮಸ್ಯೆಗಳನ್ನ ಹೇಳಿದ್ದಾರೆ.ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತವುಗಳನ್ನ ಬಗೆಹರಿಸುತ್ತೇನೆ‌.
 
ಕೆಲವು ಸಮಸ್ಯೆಗಳನ್ನ ಸಿಎಂ‌ ಮುಂದೆ ಪ್ರಸ್ತಾಪಿಸುತ್ತೇನೆ.ಲೈಪ್ ಟ್ಯಾಕ್ಸ್ ಗಳನ್ನ 10ಲಕ್ಷಕ್ಕೆ ಹೆಚ್ಚಿಸಲಾಗಿದೆ.ಟ್ಯಾಕ್ಸ್ ಕಡಿಮೆ ಮಾಡಲು ಹೇಳಿದ್ದಾರೆ.ಮುಖ್ಯಮಂತ್ರಿ ಗಳ‌ ಬಳಿ‌ ವಿಚಾರವನ್ನ ಪ್ರಸ್ತಾಪಿಸುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ