ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ : ಹೊರಟ್ಟಿ

ಮಂಗಳವಾರ, 19 ಏಪ್ರಿಲ್ 2022 (15:02 IST)
ಹಾವೇರಿ : ನಾನು ಚುನಾವಣೆಗೆ ನಿಲ್ಲುತ್ತೇನೆ, ಗೆಲ್ಲುತ್ತೇನೆ. ಶಿಕ್ಷಕರು ನನ್ನನ್ನು ಎಂದಿಗೂ ಕೈಬಿಟ್ಟಿಲ್ಲ, ಬಿಡುವುದಿಲ್ಲ.

24 ಗಂಟೆ ಕೆಲಸ ಮಾಡುವವನನ್ನು ಬಿಟ್ಟು ಬೇರೆಯವರಿಗೆ ಯಾಕೆ ವೋಟು ಹಾಕುತ್ತಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದರು.

ಸಭಾಪತಿ ಇದ್ದವನು ಪಕ್ಷಾಂತರ ಮಾಡಿ ಹೋಗಬೇಕಾ? ಹಾಗಿದ್ದರೆ ರಾಜೀನಾಮೆ ಕೊಟ್ಟು ಹೋಗುವೆ. ಬರುವ ಚುನಾವಣೆಯಲ್ಲಿ ಬಿಜೆಪಿಗೆ ಹೋಗುವ ಬಗ್ಗೆ ವಿಚಾರ ಮಾಡುತ್ತಿದ್ದೇನೆ.

ಅನೇಕ ಸ್ನೇಹಿತರು ಕರೆಯುತ್ತಿದ್ದಾರೆ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಸಂವಿಧಾನಬದ್ಧ ಹುದ್ದೆಯಲ್ಲಿದ್ದು ಎಲ್ಲೋ ಬಾರ್ನಲ್ಲಿ ಹೋಗಿ ಕೂತರೆ ಹುದ್ದೆ ಮುರಿದ ಹಾಗೆ. ಅಕ್ರಮ ಚಟುವಟಿಕೆ ಮಾಡಿದರೆ ಸಂವಿಧಾನಬದ್ಧ ಹುದ್ದೆಯನ್ನು ಮುರಿದಂತೆ ಎಂದರು. 

ನಾನು ಅಚ್ಚುಕಟ್ಟಾಗಿ ಕಟ್ಟುನಿಟ್ಟಿನಿಂದ ಸದನ ನಡೆಸಿದ್ದೇನೆ. ಸದನ ನಡೆಸಿದ ರೀತಿಯನ್ನು ನೀವು ನೋಡಿರಬಹುದು. ಯಾವುದರಲ್ಲೂ ನಿಯಮ ಬಿಟ್ಟು ಏನೂ ಮಾಡಿಲ್ಲ.

ಇಡಿ ರಾಜ್ಯವೇ ನನಗೆ ಒಳ್ಳೆಯವರು ಎನ್ನುತ್ತಿರುವಾಗ ಇನ್ನೊಬ್ಬರು ಕೆಟ್ಟವರು ಎನ್ನುವುದರ ಬಗ್ಗೆ ಏನೂ ಮಾಡಲು ಆಗುವುದಿಲ್ಲ. ಪ್ರಜಾಪ್ರಭುತ್ವ ಬೇರೆಯವರ ಬಗ್ಗೆ ಟೀಕೆ ಮಾಡುವುದಿಲ್ಲ. ಯಾರು ಏನೇ ಹೇಳಿದರೂ ಅದಕ್ಕೆ ನನ್ನ ತಕರಾರು ಇಲ್ಲ. ನನ್ನ ನಿರ್ಧಾರದ ಪ್ರಕಾರ ನಾನು ಸರಿಯಿದ್ದೇನೆ ಎಂದರು.

ಬೆಡ್ ರೂಂ ಬೇರೆ ಅಂಗಳವೇ ಬೇರೆ. ಬೆಡ್ ರೂಂನಲ್ಲಿ ಮಾಡುವುದು ಬೆಡ್ ರೂಂನಲ್ಲಿಯೇ ಮಾಡಬೇಕು. ನನಗೆ ಈವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲ. ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ