ಪೇಜಾವರ ಶ್ರೀ ಪರ ಸಚಿವ ಆಂಜನೇಯ ಬ್ಯಾಟಿಂಗ್

ಶುಕ್ರವಾರ, 14 ಅಕ್ಟೋಬರ್ 2016 (15:33 IST)
ಉಡುಪಿಯ ಪೇಜಾವರ ಶ್ರೀಗಳ ಪರವಾಗಿ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಬ್ಯಾಟ್ ಬೀಸಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಸಚಿವರು, ಶ್ರೀಗಳು ದಲಿತರ ಪರವಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ದಲಿತ ಕೇರಿಗಳಿಗೆ ಹೋಗಿದ್ದಾರೆ. ಅವರ ಜೊತೆ ಮಾತನಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ. 
 
ಯಾರು ಕೂಡ ಮಠಕ್ಕೆ ಮುತ್ತಿಗೆ ಹಾಕುವುದು ಸರಿಯಲ್ಲ. ಹಾಗೆಯೇ ಕೃಷ್ಣ ಮಠದಲ್ಲಿ ಪಂಕ್ತಿಬೇಧ ಕೂಡ ಮಾಡಬಾರದು ಎಲ್ಲರನ್ನು
ಸಮಾನತೆಯಿಂದ ಕಾಣಬೇಕು ಎಂದು ಅವರು ಆಗ್ರಹಿಸಿದ್ದಾರೆ.
 
ದಲಿತ ಕಲಾವಿದರಿಗೆ ಸಿಂಗಾಪುರ ಪ್ರವಾಸ ಆಯೋಜಿಸಿರುವ ಬಗ್ಗೆ ಮಾಹಿತಿ ನೀಡಿದ ಅವರು ಅಮೇರಿಕಾಕ್ಕೆ ಹೊರಟಿದ್ದಾಗ ವೀಸಾ ಸಿಗದೇ ಪ್ರವಾಸ ರದ್ದಾಗಿತ್ತು. ಮತ್ತೀಗ ಸಿಂಗಾಪುರದ ಕನ್ನಡ ಸಮಾರಂಭಕ್ಕೆ ಕಳುಹಿಸುತ್ತಿದ್ದೇವೆ. 29, 30 ರಂದು ದಲಿತ ಕಲಾವಿದರು ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು  ತಿಳಿಸಿದ್ದಾರೆ. 
 
ಭಾನುವಾರ ನಡೆದ ಉಡುಪಿ ಉಡುಪಿ ಚಲೋ ಸಮಾವೇಶದಲ್ಲಿ, ಶ್ರೀಕೃಷ್ಣಮಠದಲ್ಲಿ ಪಂಕ್ತಿಬೇಧ ನಡೆಯುತ್ತಿದೆ. ಇದನ್ನು ವಿರೋಧಿಸಿ ಮಠಕ್ಕೆ ಮುತ್ತಿಗೆ  ಹಾಕುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದರು. ಮಠಕ್ಕೆ ಮುತ್ತಿಗೆ ಹಾಕಿದರೆ ತಾವು ಅನಿರ್ದಾಷ್ಟವಧಿ ಉಪವಾಸ ಆರಂಭಿಸುವುದಾಗಿ ಗುರುವಾರ ಶ್ರೀಗಳು ಎಚ್ಚರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ