ವಸತಿ ಖಾತೆ ಸಚಿವ ಅಂಬರೀಶ್‌ಗೆ ಸಚಿವ ಸ್ಥಾನದಿಂದ ಕೊಕ್ ನೀಡಲಾಗಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಅಂಬರೀಶ್ ಜೆಡಿಎಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುವುದಾಗಿ ಮಂಡ್ಯ ಸಂಸದ ಪುಟ್ಟರಾಜು ಹೇಳಿದ್ದಾರೆ.
ಸಂಪುಟ ಪುನಾರಚನೆಯಲ್ಲಿ ತಮ್ಮನ್ನು ಕೈಬಿಡಲಾಗಿದೆ ಎಂದು ವಸತಿ ಸಚಿವ ಅಂಬರೀಶ್ ಹೇಳಿಕೆ ನೀಡಿದ ನಂತರ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೆಳೆದುಕೊಳ್ಳುವ ಭಾರಿ ಪ್ರಯತ್ನ ಜೆಡಿಎಸ್ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸಚಿವರನ್ನಾಗಿ ಮಾಡಿದವರು ಆವರೇ, ಸಚಿವ ಸ್ಥಾನದಿಂದ ಕೈಬಿಡುವವರು ಅವರೇ. ಸಂಪುಟದಿಂದ ಕೈಬಿಟ್ಟರೂ, ಬಿಡದಿದ್ದರೂ ಸಂತೋಷ ಎಂದು ವಸತಿ ಖಾತೆ ಸಚಿವ ಅಂಬರೀಶ್ ತಿಳಿಸಿದ್ದಾರೆ.
ಯಾರನ್ನಾದರೂ ಶಿಕ್ಷಿಸಬೇಕು ಎಂದರೆ ಅವರು ತಪ್ಪು ಮಾಡಿರಬೇಕು. ತಪ್ಪು ಮಾಡಿದಾಗ ಶಿಕ್ಷಿಸಬೇಕು. ನನ್ನಲ್ಲಿ ಪಿನ್ ಪಾಯಿಂಟ್ ತಪ್ಪು ಕಂಡುಹಿಡಿಯಲು ಆಗುವುದಿಲ್ಲ. ಸಚಿವನಾಗಿ ಮೂರು ವರ್ಷದ ಸಾಧನೆಯನ್ನು ಜನತೆ ಹೇಳಬೇಕಾಗಿದೆ. ನಾನೇ ಹೇಳುವುದು ಸಾಧನೆಯಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ