ವಿಭಜನೆಯಾದರೆ ಎರಡೂ ಧರ್ಮಕ್ಕೂ ನಷ್ಟ: ಪೇಜಾವರ ಶ್ರೀ

ಮಂಗಳವಾರ, 25 ಜುಲೈ 2017 (18:47 IST)
ವೀರಶೈವ- ಲಿಂಗಾಯುತ ಧರ್ಮ ವಿಭಜನೆಯಾದರೆ ಎರಡೂ ಧರ್ಮಕ್ಕೂ ನಷ್ಟವಾಗಲಿದೆ. ಯಾರು ಅನ್ಯತಾ ಭಾವಿಸಬಾರದು ಎಂದು ಉಡುಪಿ ಶ್ರೀಕೃಷ್ಣಮಠದ ಪೇಜಾವರ ಶ್ರೀಗಳು ಹೇಳಿದ್ದಾರೆ.
 
ನನಗೆ ಎಲ್ಲಾ ಲಿಂಗಾಯುತ ಸ್ವಾಮಿಜಿಗಳೊಂದಿಗೆ ಉತ್ತಮ ಸಂಬಂಧವಿರುವುದರಿಂದ ಧರ್ಮ ವಿಭಜನೆಯಾಗೋದು ಬೇಡ ಜೊತೆಯಾಗಿ ಸಾಗೋಣ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ಆದರೆ, ನನ್ನ ಅಭಿಪ್ರಾಯಕ್ಕೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
 
ವಿಭಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ. ಆದರೆ, ಇಲ್ಲಿಯವರೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿಲ್ಲ. ಚರ್ಚಾ ಹಂತದಲ್ಲಿದೆ ಎಂದು ಗೊತ್ತಾಗಿದ್ದಾಗಿ ತಿಳಿಸಿದ್ದಾರೆ.
 
ಪ್ರತ್ಯೇಕ ಲಿಂಗಾಯುತ ಧರ್ಮ ಸ್ಥಾಪನೆಯ ಬೇಡಿಕೆ ವಿಚಾರದಲ್ಲಿ ಪೇಜಾವರ ಶ್ರೀಗಳು ಮಧ್ಯಪ್ರವೇಶ ಮಾಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ