ಸಿಎಂ ರಾಜೀನಾಮೆ ನೀಡಿದಲ್ಲಿ ಉಪಮುಖ್ಯಮಂತ್ರಿಗಳ ಭವಿಷ್ಯವೇನು..?

ಶನಿವಾರ, 24 ಜುಲೈ 2021 (11:14 IST)
ಬೆಂಗಳೂರು (ಜು.24): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆಯೇ  ಈಗಿರುವ 3 ಉಪ ಮುಖ್ಯಮಂತ್ರಿಗಳ ಭವಿಷ್ಯ ಏನು ಎಂಬುದರ ಬಗ್ಗೆ ರಾಜ್ಯ  ಬಿಜೆಪಿಯಲ್ಲಿ ಚರ್ಚೆ ನಡೆದಿದೆ.


•             ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡುವುದು ಖಚಿತ?
•             ಈಗಿರುವ 3 ಉಪ ಮುಖ್ಯಮಂತ್ರಿಗಳ ಭವಿಷ್ಯ ಏನು ಎಂಬುದರ ಬಗ್ಗೆ ರಾಜ್ಯ  ಬಿಜೆಪಿಯಲ್ಲಿ ಚರ್ಚೆ ನಡೆದಿದೆ.

ಮುಖ್ಯಮಂತ್ರಿ ಸ್ಥಾನ ಯಾವ ಸಮುದಾಯಕ್ಕೆ ಸೇರಿದವರಿಗೆ  ಸಿಗುತ್ತದೆ ಎಂಬುದರ ಮೇಲೆ ಈಗಿರುವ  ಉಪಮುಖ್ಯಮಂತ್ರಿಗಳ ಭವಿಷ್ಯ ನಿರ್ಧಾರವಾಗಬಹುದು. ಆದರೂ ಒಬ್ಬರೂ ಅಥವಾ ಇಬ್ಬರೂ ತಮ್ಮ ಸ್ಥಾನ ಕಳೆದುಕೊಳ್ಳಬಹುದು ಅಥವಾ ಹಿಂಬಡ್ತಿ ಪಡೆಯಬಹುದು ಎನ್ನಲಾಗುತ್ತಿದೆ.
ಸಿಎಂ ಪಟ್ಟಕ್ಕೆ ನಾನೇ ನಾನೇ ಎನ್ನುವ ಯಾರೂ ಸಿಎಂ ಆಗಲ್ಲ : ಮತ್ತೆ ಯಾರಿಗೆ..?
ಸದ್ಯ ಪರಿಶಿಷ್ಟ ವರ್ಗಕ್ಕೆ ಸೇರಿದ ಗೋವಿಂದ  ಕಾರಜೋಳ,  ಒಕ್ಕಲಿಗ ಸಮುದಾಯಕ್ಕೆ  ಸೇರಿದ  ಡಾ. ಸಿಎನ್ ಅಶ್ವತ್ಥನಾರಾಯಣ ಅವರು ಉಪಮುಖ್ಯಮಂತ್ರಿಗಳಾಗಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರೂ ಮತ್ತು ಚುನಾವಣೆಯಲ್ಲಿ ಸೋಲುಂಡಿದ್ದರೂ ಅದೇ ಸಮುದಾಯದ ಲಕ್ಷ್ಣಣ ಸವದಿ ಅವರನ್ನು  ಉಪಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರ ಕೈಗೊಂಡಿದ್ದು, ಬಿಜೆಪಿ ವರಿಷ್ಠರು  ಯಡಿಯೂರಪ್ಪ ಅವರಿಗೆ ಸವದಿ ಪರ್ಯಾಯ ನಾಯಕನಾಗಬಹುದು ಎಂಬ ಲೆಕ್ಕಾಚಾರ ಅದರ ಹಿಂದಿತ್ತು.
 ಅವರ ಎಣಿಕೆ ಸರಿಯೋ ಅಥವಾ ತಪ್ಪೋ ಎಂಬುದು ಇದೀಗ ನೂತನ ಮುಖ್ಯಮಂತ್ರಿ ಆಯ್ಕೆ ಬಳಿಕ ಸ್ಪಷ್ಟವಾಗಿ ಗೊತ್ತಾಗಲಿದೆ. ಆದರೆ ಈಗ ಬೇರೋಬ್ಬ ಲಿಂಗಾಯತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದಲ್ಲಿ ಲಕ್ಷ್ಮಣ್ ಸವದಿ ಅವರು ಈಗಿರುವ  ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಹಿಂಬಡ್ತಿ ಪಡೆಯಬಹುದು ಎಂಬ ಮಾತು ಕೇಳಿಬರುತ್ತಿದೆ. ಅದೇ ರಿತಿ ಜೆಡಿಎಸ್ ಜತೆಗಿನ ಸಮ್ಮಿಶ್ರ ಸರ್ಕಾರದ 20 ತಿಂಗಳ ಅವಧಿ ಬಳಿಕ ಬಿಜೆಪಿ ಸರ್ಕಾರದ ಐದು ವರ್ಷ ಹಾಗೂ ಈಗಿನ ಸರ್ಕಾರದಲ್ಲಿ ಎರಡು ವರ್ಷ ಸತತವಾಗಿ ಅಧಿಕಾರದಲ್ಲಿರುವ ಗೋವಿಂದ ಕಾರಜೋಳ ಅವರು ಪತಿಶಿಷ್ಟ  ಸಮುದಾಯದ ಎಡಗೈ ಗುಂಪಿನ ಅಗ್ರಗಣ್ಯ ನಾಯಕರು. ಆದರೆ  ಅಧಿಕಾರದಲ್ಲಿರುವವರು ತ್ಯಾಗ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ನಿಲುವನ್ನು ಪಕ್ಷ ಕೈಗೊಂಡೊಲ್ಲಿ  ಕಾರಜೋಳ ಅವರ ಸ್ಥಾನಕ್ಕೆ ಅಪಾಯ ಎದುರಾಗಬಹುದು. ಆದರೆ ಈ ಸಾಧ್ಯತೆಗಳು ಕಡಿಮೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ