ಶಾಲೆಯಲ್ಲಿ ಗಣೇಶೋತ್ಸವ ಆಚರಿಸಿದರೆ ಕೋಮುವಾದ

Sampriya

ಮಂಗಳವಾರ, 27 ಆಗಸ್ಟ್ 2024 (17:14 IST)
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಜಾತ್ಯತೀತತೆ ಎಂಬುದು ಹಿಂದೂ ಧರ್ಮವನ್ನ ವಿರೋಧಿಸಲು, ಹಿಂದೂಗಳನ್ನ ದ್ವೇಷಿಸಲು ಇರುವ ಒಂದು ಮುಖವಾಡವೇ ಹೊರತು, ಮತ್ತೇನು ಅಲ್ಲ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಅವರು ಹನೂರು ಕ್ರಿಸ್ತರಾಜ ಪದವಿ  ಪೂರ್ವ ಕಾಲೇಜು,  ಮಾರ್ಟಳ್ಳಿ ಸೆಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು  ಇದರ ಆಶ್ರಯದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿ ಪ್ರತ್ರದಲ್ಲಿ ಯೇಸು ಕ್ರಿಸ್ತ ಮತ್ತು ಮೇರಿ ಫೋಟೋವನ್ನು ಹಾಕಿರುವುದಕ್ಕೆ ಕಾಂಗ್ರೆಸ್ ಸರ್ಕಾರವನ್ನು ಅವರು ಪ್ರಶ್ನೆಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಸ್ಟ್ ಹಾಕಿರುವ ಅವರು, ಶಾಲೆಗಳ ಮುಖ್ಯದ್ವಾರದಲ್ಲಿ "ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ" ಎಂಬ ಸಾಲು ಬರೆಯುವುದು ಕೋಮುವಾದ

ಶಾಲಾ ಕಾಲೇಜುಗಳ ಆವರಣದಲ್ಲಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಕೋಮುವಾದ

ಆದರೆ ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗು ಮೇರಿ ಫೋಟೋ ಹಾಕುವುದು ಮಾತ್ರ ಜಾತ್ಯತೀತ!

ಇದು ಕಾಂಗ್ರೆಸ್ ಸರ್ಕಾರದ ನಿಜವಾದ ಜಾತ್ಯತೀತತೆ.

ಕಾಂಗ್ರೆಸ್ ಪಕ್ಷಕ್ಕೆ ಜಾತ್ಯತೀತತೆ ಎಂಬುದು ಹಿಂದೂ ಧರ್ಮವನ್ನ ವಿರೋಧಿಸಲು, ಹಿಂದೂಗಳನ್ನ ದ್ವೇಷಿಸಲು ಇರುವ ಒಂದು ಮುಖವಾಡವೇ ಹೊರತು, ಮತ್ತೇನು ಅಲ್ಲ.

ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರು ಶೀಘ್ರದಲ್ಲೆ ತಕ್ಕ ಪಾಠ ಕಲಿಸುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ