ಅನಾವಶ್ಯಕವಾಗಿ ಹೊರ ಬಂದರೆ ಕ್ರಮ ಕೈಗೊಳ್ಳಲಾಗುವುದು- ಸಿಎಂ ಎಚ್ಚರಿಕೆ

ಮಂಗಳವಾರ, 24 ಮಾರ್ಚ್ 2020 (10:08 IST)
ಬೆಂಗಳೂರು : ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಗೆ ಎಲ್ಲರೂ ಸಹಕರಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರುಕಟ್ಟೆಗೆ ಯಾರೂ ಬರಬೇಡಿ. ಆಡಂಬರದಿಂದ ಯುಗಾದಿ ಆಚರಿಸಬೇಡಿ. ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆ ಇಲ್ಲ. ಕೊರೊನಾ ಗಂಭೀರತೆ ಅರ್ಥಮಾಡಿಕೊಳ್ಳಿ. ಮಾ.31ರವರೆಗೆ ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದಾರೆ.

 

ಅಲ್ಲದೇ ಅನಾವಶ್ಯಕವಾಗಿ ಹೊರ ಬಂದರೆ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿದರೆ ಪೊಲೀಸರಿಂದ ಕ್ರಮ ಕೈಗೊಳ್ಳುತ್ತಾರೆ. ಪೊಲೀಸರು ಕ್ರಮ ಕೈಗೊಂಡರೆ ನನ್ನನ್ನು ದೂಷಿಸಬೇಡಿ. ನಿಮಗೆ ಕೊನೆಯದಾಗಿ ನಾನು ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಅವರು ಜನರಿಗೆ ವಾರ್ನ್ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ