ಕರೆಂಟ್ ಇಲ್ಲ ಅಂದ್ರೂ ಅದು ಸಿಕ್ಕೇ ಸಿಗುತ್ತೆ

ಶನಿವಾರ, 3 ಆಗಸ್ಟ್ 2019 (15:34 IST)
ವಿದ್ಯುತ್ ಇಲ್ಲದ ಸಮಯದಲ್ಲಿಯೂ ವಿತರಣೆ ಮಾಡಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ.

ವಿದ್ಯುತ್ ಇಲ್ಲದ ಸಮಯದಲ್ಲಿಯೂ  ಮಿನಿ ವಿಧಾನಸೌಧದ ಎರಡು ಕೇಂದ್ರಗಳಲ್ಲಿ ಆರ್.ಟಿ.ಸಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಮಂಡ್ಯ ಜಿಲ್ಲೆಯ  ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಎರಡು ಪ್ರತ್ಯೇಕ ಕೌಂಟರ್ ಗಳನ್ನು ಸ್ಥಾಪಿಸಲಾಗಿದೆ. ಆರ್.ಟಿ.ಸಿ ಪಹಣಿಯನ್ನು ವಿತರಿಸಲು ಕ್ರಮ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ ಅಂತ ತಹಶೀಲ್ದಾರ್ ಎಂ. ಶಿವಮೂರ್ತಿ ಹೇಳಿದ್ದಾರೆ.

ವಿದ್ಯುಚ್ಛಕ್ತಿ ಇಲ್ಲದ ಸಮಯದಲ್ಲಿಯೂ ಆರ್.ಟಿ.ಸಿ ವಿತರಣೆಗೆ ತಾಲ್ಲೂಕು ಆಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.  ಎರಡೂ ಆರ್.ಟಿ.ಸಿ ವಿತರಣಾ ಕೇಂದ್ರಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ರೈತರು ಸರ್ಕಾರಿ ಕಛೇರಿ ಅವಧಿಯ ಸಮಯದಲ್ಲಿ ಬಂದು ಆರ್.ಟಿ.ಸಿ ಪಹಣಿ ಪಡೆದುಕೊಳ್ಳಬಹುದು.

 
ಆಧಾರ್ ಕೇಂದ್ರಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲಾಗಿದೆ ಅಂತ ಶಿವಮೂರ್ತಿ ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ