ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ್ರೆ, ಬಾಬ್ರಿ ಮಸೀದಿಯೂ ಆಗಲಿ- ಸಚಿವ ಜಮೀರ್ ಅಹ್ಮದ್
ಸೋಮವಾರ, 5 ನವೆಂಬರ್ 2018 (12:37 IST)
ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ್ರೆ, ಬಾಬ್ರಿ ಮಸೀದಿಯೂ ಆಗಲಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್ ಅಹ್ಮದ್, ‘ರಾಮ ಮಂದಿರ ಕಟ್ಟಲು ದೇಶದ ಯಾವ ಮುಸ್ಲಿಮರು ವಿರೋಧ ಮಾಡಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಜೊತೆ ಮಸೀದಿಯೂ ನಿರ್ಮಾಣ ಆಗಲಿ ಎನ್ನುವುದು ಮುಸ್ಲಿಂ ಆಶಯ’ ಎಂದು ಹೇಳಿದ್ದಾರೆ.
ಹಾಗೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು,’ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರಿಗೆ ರಾಮಮಂದಿರದ ನೆನಪು ಆಗುತ್ತಿದೆ. 2014ರಲ್ಲೇ ಅಧಿಕಾರಕ್ಕೆ ಬಂದರೂ ಅಲ್ಲಿಂದ ಇಲ್ಲಿಯವರೆಗೆ ಈ ವಿಚಾರ ಮಾತನಾಡಿಲ್ಲ. ಚುನಾವಣೆಗಾಗಿ ಮತ್ತೆ ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಮತ್ತೆ ಸುಮ್ಮನಾಗುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.