ಅಯೋಧ್ಯೆ ವಿವಾದ: ಹೊರಬಿತ್ತು ಸುಪ್ರೀಂ ಕೋರ್ಟನ ಮಹತ್ವದ ತೀರ್ಪು

ಗುರುವಾರ, 27 ಸೆಪ್ಟಂಬರ್ 2018 (18:29 IST)
ಸುಪ್ರೀಂ ಕೋರ್ಟ ನ ಮತ್ತೊಂದು ಮಹತ್ವದ ತೀರ್ಪು ಹೊರಬಿದ್ದಿದೆ. ಇಸ್ಲಾಂನಲ್ಲಿ ಮಸೀದಿಗೆ ಧಾರ್ಮಿಕ ಪಾವಿತ್ರತೆ ಇಲ್ಲ ಎಂದು ಹೇಳುವ ಮೂಲಕ ಅಯೋಧ್ಯೆ ವಿವಾದ ಕುರಿತು ಮಹತ್ವ ತೀರ್ಪು ನೀಡಿದೆ.

1994ರಲ್ಲಿ ಇಸ್ಮಾಯಿಲ್ ಫಾರೂಕಿ ಹಾಗೂ ಭಾರತ ಸರಕಾರ ಸಂಬಂಧಿಸಿದಂತೆ ತಾನು ನೀಡಿದ್ದ ತೀರ್ಪನ್ನು ನ್ಯಾಯಪೀಠವು ಎತ್ತಿಹಿಡಿದಿದೆ.

ರಾಮಜನ್ಮಭೂಮಿ ವಿವಾದದ ಕುರಿತಂತೆ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಿಲ್ಲ. ಮುಸ್ಲಿಂ ಸಮುದಾಯದ ಜನರು ಮಸೀದಿಯಲ್ಲದೆ ಬೇರೆ ಕಡೆ ನಮಾಜ್ ಮಾಡಬಹುದು ಎಂದು ಹೇಳಿದೆ. ಮುಸ್ಲಿಂ ಸಮುದಾಯ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಬೇಕು ಎಂದಿಲ್ಲ ಎಂದು ಹೇಳಿರುವುದರಿಂದ ಅಯೋದ್ಯೆ ರಾಮಜನ್ಮ ಭೂಮಿ ಪ್ರಕರಣದ ತೀರ್ಪಿಗೆ ಹಾದಿ ಸುಗಮವಾಗಲು ದಾರಿ ಮಾಡಿಕೊಟ್ಟಂತಾಗಿದೆ.

ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಈ ಆದೇಶ ಪ್ರಕಟಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ