ಸಿಎಂ ತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿ ಪ್ರವೇಶಿಸಲಿ: ಸೊಗಡು ಶಿವಣ್ಣ

ಮಂಗಳವಾರ, 24 ಅಕ್ಟೋಬರ್ 2017 (12:56 IST)
ತುಮಕೂರು: ಸಿಎಂ ಸಿದ್ದರಾಮಯ್ಯ ತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿ ಪ್ರವೇಶ ಮಾಡಲಿ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಸವಾಲು ಹಾಕಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಅಹಂಕಾರ. ಹೀಗಾಗಿ ಇಂತಹ ವರ್ತನೆ ತೋರುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ವೇಳೆ ಮೀನೂಟ ಮಾಡಿ ಧರ್ಮಸ್ಥಳ ದೇವಾಲಯದೊಳಗೆ ಪ್ರವೇಶ ಮಾಡಿರುವ ವಿಚಾರ ಫೋಟೊ ಸಹಿತ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಇದು ವ್ಯಾಪಕ ಚರ್ಚೆಗೂ ಒಳಗಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ