ನೇಪಾಳಿ ಕೆಲಸದವರಿದ್ರೆ ಇಂದೇ ಖಾಲಿ ಮಾಡ್ಸಿ, ಇಲ್ಲ ನಿಮ್ಮ ಮನೆ ಖಾಲಿ ಮಾಡ್ತಾರೆ..!

ಬುಧವಾರ, 16 ನವೆಂಬರ್ 2022 (18:42 IST)
ಒಂದು ಕಾಲದಲ್ಲಿ ಮನೆ ಕಾಯೋದು ರಸ್ತೆ ಕಾಯೋದು ಅಂದ್ರೆ ನಮಗೆಲ್ಲ ನಂಬಿಕಸ್ಥರು ಅಂದ್ರೆ ಅದು ನೇಪಾಳಿಗಳು. ಗೂರ್ಕ ಕೆಲಸದಲ್ಲಿ ಅವ್ರೂ ಅಷ್ಟು ನಿಯತ್ತು ಉಳಿಸಿಕೊಂಡಿದ್ರು. ಸದ್ಯ ಅಂದಿನ ಆ ನಿಯತ್ತನ್ನೆ ಬಂಡವಾಳ ಮಾಡಿಕೊಂಡಿರೋ ನೇಪಾಳಿಗಳು ಉಂಡಮನೆಗೆ ಕನ್ನಹಾಕೋ ಕಾಯಕದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ.
 
ಅದ್ರಲ್ಲೂ ಇವ್ರ ಟಾರ್ಗೆಟ್ ರಾಜಕಾರಣಿಗಳು, ಉದ್ಯಮಿಗಳು ಮತ್ತು ಆಗರ್ಭ ಶ್ರೀಮಂತರು. ಎಸ್  ಸಿಲಿಕಾನ್ ಸಿಟಿಯ  ಸಿರಿವಂತರು ತಮ್ಮ ಸಂಪತ್ತಿನ ಗುಟ್ಟು ರಟ್ಟಾಗದಿರ್ಟಿ ಅಂತ ನೇಪಾಳಿಗಳನ್ನ ಸೆಕ್ಯೂರಿಟಿ ಗಾರ್ಡ್ ಮತ್ತು ಅವರ ಪತ್ನಿಯನ್ನ ಮನೆ ಕೆಲಸಕ್ಕೆ ಸೇರಿಸಿಕೊಳ್ತಾರೆ. ಮೊದಲಿಗೆ ನೀವೂ ಕೊಡೋ ಬಿಡಿಗಾಸಿಗೆ ಫುಲ್ ಆಕ್ಟೀವ್ ಆಗಿ ಕೆಲಸ ಮಾಡೋ ಇವ್ರು
ಒಳ್ಳೆಯವರಂತೆ ಕೆಲಸ ನಂಬಿಕೆಗಳಿಸ್ತಾರೆ.  ಮೂರ್ನಾಲ್ಕು ತಿಂಗಳಾದಮೇಲೆ ಅಸಲಿ ಆಟ ಶುರು ಮಾಡೋ ಇವ್ರು ಮತ್ತೆ ಮಾಲೀಕಿಗೆ ಮುಖ ಕಾಣದಂತೆ ಎಸ್ಕೇಪ್ ಆಗ್ತಾರೆ. ಅದು ಬರಿಗೈಲಲ್ಲ ಮನೆಯಲ್ಲಿರೋ ನಗನಾಣ್ಯ ದೋಚಿ.
 
ನಗರದ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನೇಪಾಳದವರ ಕೈಚಳಕ ಬರೋಬ್ಬರಿ 75 ಲಕ್ಷ ಬೆಲೆಬಾಳುವ ಚಿನ್ನ, ವಜ್ರ ಹಾಗೂ ನಗದು ದೋಚಿ ಪರಾರಿಯಾಗಿದೆ. ಕಳೆದ 6 ತಿಂಗಳ ಕೆಲಸಕ್ಕೆ ಸೇರಿದ ನೇಪಾಳಿ ದಂಪತಿ ಸಿಂಗಾಪುರ ಹೋಗ್ತಿದ್ದಂತೆ ಮನೆಯನ್ನೇ ದೋಚಿದ್ದಾರೆ.ಮನೆಯಿಂದ ಹೋಗುವಾಗ ಸಿಸಿಟಿವಿ ಡಿವಿಆರ್ ಸಮೇತ ಎಸ್ಕೇಪ್ ಆಗಿದ್ದಾರೆ. ಬೆಂಗಳೂರಿನಲ್ಲಿ ಪದೇ ಪದೇ ಪದೇ ಪದೇ ನೇಪಾಳ ಮೂಲದವರಿಂದ ನಡೀತಿದೆ ಮನೆಗೆಲಸ , ಸೆಕ್ಯುರಿಟಿ ಕೆಲಸಕ್ಕೆಂದು ಬರೋ ನೇಪಾಳ ಮೂಲದವರುವಇತ್ತೀಚೆಗೆ ಬೆಂಗಳೂರಿನಲ್ಲಿ ಐದಾರು ಮನಗಳಲ್ಲಿ ಕೋಟಿ ಕೋಟಿ ದೋಚಿ ಪರಾರಿಯಾಗಿದ್ರೂ ಯಾವ ಕೇಸ್ ನಲ್ಲೂ ಆರೋಪಿಗಳು ಇದ್ದಾರೆ. ಇತ್ತ ಆರೋಪಿಗಳು ಪತ್ತೆಯಾದ್ರು ಚಿನ್ನಾಭರಣ ರಿಕವರಿಯಾಗಿಲ್ಲ. 
 
ಇದೀಗ ಹನುಮಂತನಗರ ಠಾಣಾ ವ್ಯಾಪ್ತಿಯ ವರುಣ್ ಎಂಬುವವರ ಮನೆಯಲ್ಲಿ ಕೃತ್ಯ ನಡೆದಿದ್ದು ಸದ್ಯ ಆರೋಪಿಗಳಿಗಾಗಿ ಹನುಮಂತ ನಗರ ಪೊಲೀಸರು ಬಲೆ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ