ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಪ್ರತಿ ಸಿಗ್ನಲ್ನಲ್ಲೂ ಬೀಳುತ್ತೆ ದಂಡ!

ಶನಿವಾರ, 4 ಫೆಬ್ರವರಿ 2023 (09:12 IST)
ಬೆಂಗಳೂರು :  ಭಾರೀ ದಂಡದ ಬಿಸಿ ಮುಟ್ಟಿಸಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಈ ಹಿಂದೆ ಹೆಲ್ಮೆಟ್ ನಿಯಮ ಉಲ್ಲಂಘಿಸಿ ಒಮ್ಮೆ ದಂಡ ಕಟ್ಟಿ ರಸೀದಿ ತೋರಿಸಿ ಮುಂದೋಗಬಹುದಿತ್ತು.
 
ಆದ್ರೀಗ ಪ್ರತಿ ಸಿಗ್ನಲ್ನಲ್ಲೂ 500 ರೂಪಾಯಿಯಂತೆ ದಂಡ ವಿಧಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ ತಂತ್ರಜ್ಞಾನ ಬಳಸಿಕೊಳ್ತಿದ್ದಾರೆ. 

ಏನಿದು ಇಂಟಲಿಜೆಂಟ್ ಸಿಸ್ಟಂ?

ಹೌದು, ಐಟಿಎಂಎಸ್ ಬೆಂಗಳೂರಲ್ಲಿ ಇತ್ತೀಚೆಗೆ ಜಾರಿಯಾದ ಸಿಸ್ಟಂ. ಐಟಿಎಂಎಸ್ ಅಂದ್ರೇ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ. ಡಿಜಿಟಲ್ ಕ್ಯಾಮರಾ ಮೂಲಕ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ದಂಡ ಹಾಕೋ ವಿಧಾನ ಇದು. ಬೆಂಗಳೂರಿನ ಎಲ್ಲಾ ಜಂಕ್ಷನ್ ಗಳಲ್ಲೂ ಐಟಿಎಂಎಸ್ ವ್ಯವಸ್ಥೆ ಮಾಡಲಾಗುತ್ತಿದೆ.

ಒಬ್ಬ ರೈಡರ್ ಹೆಲ್ಮೆಟ್ ಹಾಕದೇ ಹತ್ತಾರು ಸಿಗ್ನಲ್ ದಾಟಿದ್ರೆ 10 ಸಾವಿರ ದಂಡ ಸಹ ಬೀಳಬಹುದು. ಐಟಿಎಂಎಸ್ ನಿಂದ ಕಳೆದ ಒಂದೂವರೆ ತಿಂಗಳಲ್ಲಿ ಕೇಸ್ ಸಂಖ್ಯೆ ಸಹ ದುಪ್ಪಟ್ಟಾಗಿದೆ. ಬರೋಬ್ಬರಿ 9 ಲಕ್ಷ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ