ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಶನಿದೇವರ ಕೋಪಕ್ಕೆ ತುತ್ತಾಗುವಿರಿ ಹುಷಾರ್!

ಬುಧವಾರ, 6 ಡಿಸೆಂಬರ್ 2017 (16:43 IST)
ಬೆಂಗಳೂರು: ನಾವು ರಸ್ತೆಯಲ್ಲಿ ನಡೆದು ಹೋಗುವಾಗ ಕೆಲವರು ರಸ್ತೆ ಬದಿಯಲ್ಲಿ ಮೂತ್ರವಿಸರ್ಜನೆ ಮಾಡುವುದನ್ನು ನೋಡಿರುತ್ತೆವೆ.ಅವರು  ಯಾವುದೆ ನಾಚಿಕೆಯಿಲ್ಲದೆ ಎಲ್ಲರ ಎದುರು ಇಂತಹ ಹೇಸಿಗೆ ಕೃತ್ಯವನ್ನು  ಮಾಡುತ್ತಾರೆ.


ಇದನ್ನು ತಡೆಯಲು ರಾಜಾಜಿನಗರದ ಕಾರ್ಪೋರೇಟರ್ ಕೃಷ್ಣಮೂರ್ತಿ ಯವರು ಒಂದು ವಿಭಿನ್ನ ರೀತಿಯ ಆಲೊಚನೆಯನ್ನು ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ರಸ್ತೆ ಬದಿಯ ಗೋಡೆಗಳ ಮೇಲೆ ಶನಿದೇವರ ಬ್ಯಾನರ್ ಗಳನ್ನು ಅಂಟಿಸುವುದು. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರವಿಸರ್ಜನೆ ಮಾಡುವುದನ್ನು ತಡೆಬಹುದು ಎಂಬುದು ಅವರ ಅಭಿಪ್ರಾಯ.


ದೇವರ ಮೇಲೆ ಜನರಿಗೆ ಹೆಚ್ಚು ನಂಬಿಕೆ ಇರುವುದರಿಂದ್ದ  ಅಲ್ಲಿ ಮೂತ್ರವಿಸರ್ಜನೆ ಮಾಡುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಂಟಿಸುವ ಬದಲು ಶೌಚಾಲಯಗಳನ್ನು ಕಟ್ಟಿಸಿದರೆ ಜನರಿಗೆ ಅನುಕೂಲವಾಗುತ್ತಿತ್ತು ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ