ಅನೈತಿಕ ಸಂಬಂಧ: ಅತ್ತಿಗೆಯ ಕತ್ತಿಗೆ ಬ್ಲೇಡ್ ಹಾಕಿ ಹತ್ಯೆಗೈದ ಮೈದುನ ಅರೆಸ್ಟ್
ಬುಧವಾರ, 1 ನವೆಂಬರ್ 2017 (13:26 IST)
ಅತ್ತಿಗೆ-ಮೈದುನನ ಅನೈತಿಕ ಸಂಬಂಧ ವಿಕೋಪಕ್ಕೆ ತೆರಳಿದಾಗ ಮೈದುನ ಅತ್ತಿಗೆಯ ಕತ್ತನ್ನು ಬ್ಲೇಡ್‌ನಿಂದ ಕತ್ತರಿಸಿ ಪರಾರಿಯಾದ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳ ಹಿಂದೆ ಪತಿ ಸಾವನ್ನಪ್ಪಿದ ನಂತರ ಅತ್ತಿಗೆ ಸರೋಜ ಮತ್ತು ಮೈದುನ ನಟರಾಜ್ ನಡುವೆ ಅನೈತಿಕ ಸಂಬಂಧ ಆರಂಭವಾಗಿತ್ತು. ಇಬ್ಬರ ನಡುವಿನ ಸಂಬಂಧ ಕುಟುಂಬದ ಸದಸ್ಯರಿಗೆ ಸೇರಿದಂತೆ ನೆರೆಹೊರೆಯವರಿಗೆ ತಿಳಿದಿತ್ತು ಎನ್ನಲಾಗಿದೆ.
ಸೋಮುವಾರದಂದು ಮಧ್ಯ ರಾತ್ರಿ ಇಬ್ಬರ ನಡುವೆ ನಡೆದ ಜಗಳ ತಾರಕಕ್ಕೇರಿದೆ. ಮಂಗಳವಾರದಂದು ಮೈದುನ ನಟರಾಜ್ ಕೋಪದ ಭರದಲ್ಲಿ ಅತ್ತಿಗೆ ಸರೋಜಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನಟರಾಜ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ಯೆಗೆ ಅನೈತಿಕ ಸಂಬಂಧವೇ ಕಾರಣವಾಗಿದೆ ಎನ್ನಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.