ಬೇನಾಮಿ ಆಸ್ತಿ ಪ್ರಕರಣ: ಕೋರ್ಟ್‌ನಿಂದ ಯಡಿಯೂರಪ್ಪ, ಈಶ್ವರಪ್ಪಗೆ ಬಿಗ್ ರಿಲೀಫ್

ಗುರುವಾರ, 29 ಡಿಸೆಂಬರ್ 2016 (15:47 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಶಿವಮೊಗ್ಗ ಲೋಕಾಯುಕ್ತ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 
ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ವಿರುದ್ಧ ವಕೀಲ ವಿನೋದ್ ಅವರು ಸಲ್ಲಿಸಿದ್ದ ದೂರನ್ನು ಲೋಕಾಯುಕ್ತ ಕೋರ್ಟ್ ವಜಾಗೊಳಿಸಿದೆ. 
 
ಹುಣಸೇಕಟ್ಟಿ ಜಂಕ್ಷನ್‌ನಲ್ಲಿ 67 ಎಕರೆ ಅರಣ್ಯ ಪ್ರದೇಶ ಒತ್ತುವರಿ, ಬಿಎಸ್‌ವೈ ಪುತ್ರಿ ಅರುಣಾದೇವಿ ಅವರು ಪತ್ರಕರ್ತರ ಹೆಸರಿನಲ್ಲಿ 4 ನಿವೇಶನ ಖರೀದಿಸಿದ ಆರೋಪ ಹಾಗೂ ಕೋಟೆಗಂಗೂರಿನ ಧವಳಗಿರಿ ಪ್ರಾಪರ್ಟಿಸ್ ಹೆಸರಿನಲ್ಲಿ ಅಕ್ರಮವಾಗಿ ಭೂಮಿ ಖರೀದಿಸಲಾಗಿದೆ ಎಂದು ವಕೀಲ ವಿನೋದ್ ಆರೋಪಿಸಿದ್ದರು. 
 
ಇನ್ನೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು 40 ಕೋಟಿಗೂ ಅಧಿಕ ಮೌಲ್ಯದ ಆಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ದೂರು ಸಲ್ಲಿಸಲಾಗಿತ್ತು. 
 
ಈ ಪ್ರಕರಣಗಳಿಗೆ ದೂರುದಾರ ವಕೀಲ ವಿನೋದ್ ಸೂಕ್ತ ದಾಖಲೆ ಸಲ್ಲಿಸಿಲ್ಲ ಎಂದು ಲೋಕಾಯುಕ್ತ ಕೋರ್ಟ್, ಇಬ್ಬರು ನಾಯಕರಿಗೆ ರಿಲೀಫ್ ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ