ಐಎಂಎ ಬಹುಕೋಟಿ ವಂಚನೆ ಪ್ರಕರಣ; ರೋಷನ್ ಬೇಗ್ ವಿಚಾರಣೆ ಅಂತ್ಯ
ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಮಾಜಿ ಸಚಿವ ರೋಷನ್ ಬೇಗ್ ರನ್ನು ವಶಕ್ಕೆ ಪಡೆದುಕೊಂಡಿದ್ದ ಎಸ್ ಐ ಟಿ ತನ್ನ ವಿಚಾರಣೆ ಮುಗಿಸಿದೆ.
ಮತ್ತೆ ಜುಲೈ 19 ರಂದು ವಿಚಾರಣೆಗೆ ಹಾಜರಾಗಬೇಕೆಂದು ವಿಶೇಷ ತನಿಖಾ ದಳದ ಅಧಿಕಾರಿಗಳು ಬೇಗ್ ಅವರಿಗೆ ಸೂಚಿಸಿದೆ.
ವಿಚಾರಣೆ ಬಳಿಕ ಮಾತನಾಡಿರುವ ರೋಷನ್ ಬೇಗ್, ವಿಚಾರಣೆಗಾಗಿ ಎಸ್ ಐ ಟಿಯವರು ಕರೆದುಕೊಂಡು ಹೋಗಿದ್ದರು.
ಈಗ ವಿಚಾರಣೆ ಮುಗಿದಿದ್ದು ಮರಳಿ ಕಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ನೀಡೋದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾಗಿ ಬೇಗ್ ಹೇಳಿದ್ರು.
ಕೆಲವರಿಗೆ ಗೊಂದಲವಾಗಿ ನನ್ನ ಮೇಲೆ ಪಿತೂರಿ ಮಾಡಿದ್ದಾರೆ. ನಾನು ಯಾರ ವಿರುದ್ಧವೂ ಟೀಕೆ ಮಾಡೋಲ್ಲ ಎಂದರು.