ನಾಳೆ ಶಾಲಾ ಸಮಯದ ಬಗ್ಗೆ ಮಹತ್ವದ ಚರ್ಚೆಯಲ್ಲಿ ರುಪ್ಸಾ ಕರ್ನಾಟಕ ಭಾಗವಹಿಸಲಿದೆ.ಶಾಲಾವಲಯಕ್ಕೆ ಅನುಗುಣವಾಗಿ ಶಾಲಾ ಸಮಯ ಬದಲಾವಣೆ ಮಾಡಲು ಮನವಿ ಮಾಡಿದ್ದು,9 ಗಂಟೆಯೊಳಗೆ ಶಾಲೆ ಶುರು ಮಾಡುವಂತೆ ವೇಳಾಪಟ್ಟಿ ಸಿದ್ದ ಪಡಿಸಲು ಮನವಿ ಮಾಡಲಾಗಿದೆ.8 ಗಂಟೆಯಿಂದ 3 ಗಂಟೆಯವರೆಗೆ ಶಾಲೆ ನಡೆಯುವುದರ ಅನುಗುಣವಾಗಿ ಸಮಯ ಬದಲಾವಣೆ ಬಗ್ಗೆ ಸ್ಥಳೀಯ ಬಿಇಓಗಳಿಗೆ ನೀಡಬೇಕು ಎಂದು ರುಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆಯಿಂದ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ.