ಶಾಲೆ, ಕಾಲೇಜುಗಳಿಗೆ ಸೆ.24 ರವರೆಗೆ ರಜೆ ವಿಸ್ತರಣೆ

ಶನಿವಾರ, 16 ಸೆಪ್ಟಂಬರ್ 2023 (19:50 IST)
ಬಹಳ ವೇಗವಾಗಿ ನಿಪಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಕೋಝಿಕ್ಕೋಡ್ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳ ರಜೆಯನ್ನು ಸೆಪ್ಟೆಂಬರ್ 24 ರವರೆಗೆ ವಿಸ್ತರಿಸಿದೆ. ಈ ಆದೇಶವು ಶಾಲೆಗಳು, ಕಾಲೇಜುಗಳು ಮತ್ತು ಬೋಧನಾ ಕೇಂದ್ರಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಆದರೆ ಆನ್‌ಲೈನ್ ತರಗತಿಗಳು ವಾರವಿಡೀ ಮುಂದುವರಿಯುತ್ತದೆ. ಸೋಂಕಿತ ವ್ಯಕ್ತಿಗಳ ಸಂಪರ್ಕ ಪಟ್ಟಿಯು ಈಗ 1,080 ಜನರನ್ನು ಒಳಗೊಂಡಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ದಿನವೊಂದರಲ್ಲೇ 130 ಹೊಸ ಸೇರ್ಪಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ