ಇನ್ಮುಂದೆ ತುರ್ತು ಸಂದರ್ಭಗಳಲ್ಲಿ ನೆರವಿಗಾಗಿ 108 ಬದಲು 112 ಕರೆ ಮಾಡಿ

ಶುಕ್ರವಾರ, 15 ಫೆಬ್ರವರಿ 2019 (09:57 IST)
ನವದೆಹಲಿ : ಭಾರತದಲ್ಲಿ  ಜನರಿಗೆ ಯಾವುದೇ ರೀತಿಯ ಸಂಕಷ್ಟದ ಸಂದರ್ಭದಲ್ಲಿ ನೆರವು ಬೇಕಾದಲ್ಲಿ ಕರೆ ಮಾಡುವ ತುರ್ತು ಕರೆ ಸಂಖ್ಯೆಯನ್ನು ಇದೀಗ ಬದಲಾವಣೆ ಮಾಡಲಾಗಿದೆ.

ನಾಗರಿಕರ ಸಹಾಯಕ್ಕಾಗಿ ಅಮೆರಿಕ ಹೊಂದಿರುವ '911' ಮಾದರಿ ಎಮರ್ಜೆನ್ಸಿ ಸೇವೆಯನ್ನು ಭಾರತದಲ್ಲಿಯೂ ಚಾಲನೆ ಮಾಡುವ ನಿಟ್ಟಿನಲ್ಲಿ ಪೊಲೀಸ್‌ (100), ಅಗ್ನಿಶಾಮಕ (101), ಆರೋಗ್ಯ (108) ಹಾಗೂ ಮಹಿಳಾ ಸಹಾಯವಾಣಿ (1090)ಗಳ ಬೇರೆ ಬೇರೆ ಸಂಖ್ಯೆಗಳನ್ನೆಲ್ಲಾ ವಿಲೀನಗೊಳಿಸಿ '112' ಎಂಬ ತುರ್ತು ಸೇವಾ ಸಂಖ್ಯೆಯನ್ನು ಭಾರತ ರೂಪಿಸಿದೆ. ಇದಕ್ಕೆ ದೇಶದ 14 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದಿನ ವಾರ ಚಾಲನೆ ಸಿಗಲಿದೆ.


 

ಯಾವುದೇ ರೀತಿಯ ಸಂಕಷ್ಟದ ಸಂದರ್ಭದಲ್ಲಿ ನಾಗರೀಕರಿಗೆ ನೆರವು ಬೇಕಾದಾಗ ಲ್ಯಾಂಡ್‌ಲೈನ್‌ ಫೋನ್‌ನಿಂದ ಈ ಸಂಖ್ಯೆಗೆ ಡಯಲ್‌ ಮಾಡಿದರೆ ನೆರವು ಸಿಗಲಿದೆ. ಹಾಗೇ ಸ್ಮಾರ್ಟ್‌ ಫೋನ್‌ ಹೊಂದಿರುವವರು 3 ಬಾರಿ ಪವರ್‌ ಬಟನ್‌ ಒತ್ತಿದರೆ ಕರೆ ಹೋಗುತ್ತದೆ. ಇತರೆ ಫೋನ್‌ ಹೊಂದಿದವರು 5 ಅಥವಾ 9ನೇ ಸಂಖ್ಯೆಯನ್ನೇ ಹೆಚ್ಚು ಹೊತ್ತು ಒತ್ತಿ ಹಿಡಿದರೆ ಕರೆ ಕನೆಕ್ಟ್ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ