ದಕ್ಷಿಣ ಕನ್ನಡದಲ್ಲಿ 22 ಸಾವಿರಕ್ಕೂ ಅಧಿಕ ನೋಟಾಕ್ಕೆ ಮತ: ಇದು ರಾಜ್ಯದಲ್ಲೇ ಅತ್ಯಧಿಕ

sampriya

ಮಂಗಳವಾರ, 4 ಜೂನ್ 2024 (15:34 IST)
Photo By X
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22504 ನೋಟಾಗೆ ಮತದಾನ ಆಗುವ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ನೋಟಾಗೆ ಮತದಾನವಾದ ಜಿಲ್ಲೆಯಾಗಿದೆ.

ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆದ ಬೆನ್ನಲ್ಲೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹಾಗೂ ಕಾಂಗ್ರೆಸ್‌ನಿಂದ ವಕೀಲ ಪದ್ಮರಾಜ್‌ ಅವರನ್ನು ಹೊಸಬರನ್ನು ಕಣಕ್ಕಿಳಿಸಿತು. ಇದರ ಬೆನ್ನಲ್ಲೇ ಈ ಪಕ್ಷಗಳ ವಿರುದ್ಧ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಬಣ ನೋಟಾ ಮತದಾನದ ಜಾಗೃತಿಯನ್ನು ಮಾಡಿ, ಜನರಲ್ಲಿ ನೋಟಾಗೆ ಮತದಾನ ಮಾಡುವಂತೆ ಮನವಿ ಮಾಡಿತು.

ನೋಟಾ ಅಂದರೆ ಪಕ್ಷ ಅಥವಾ ಸ್ವತಂತ್ರ್ಯವಾಗಿ ನಿಂತ ಅಭ್ಯರ್ಥಿಗೆ ಮತದಾನ ಮಾಡುವ ಬದಲು ಮೇಲಿನ ಯಾರಿಗೂ ಅಲ್ಲ ಅಂತಾ ಮತದಾನ ಮಾಡುವುದು. ಅದರಂತೆ ಇದೀಗ ನೋಟಾಗೆ ಅತೀ ಹೆಚ್ಚು ದಕ್ಷಿಣ ಕನ್ನಡದಲ್ಲಿ ಮತದಾನವಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯ ಆರಂಭದಿಂದಲೂ ಬಿಜೆಪಿಯ ಬ್ರಿಜೇಶ್‌ ಚೌಟ ಮುನ್ನಡೆಯಲ್ಲಿ ಗೆಲುವಿನ ದಡ ಸೇರುತ್ತಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಪೂಜಾರಿ ವಿರುದ್ಧ  144522 ಮತಗಳ ಅಂತರದಲ್ಲಿ ಬ್ರಿಜೇಶ್‌ ಚೌಟ ಅವರು ಮುನ್ನಡೆಯಲ್ಲಿದ್ದಾರೆ. ಅಚ್ಚರಿ ವಿಷಯ ಏನೆಂದರೆ ಇದುವರೆಗಿನ ಮತ ಎಣಿಕೆಯಲ್ಲಿ 22504 ಕ್ಕೂ ಅಧಿಕ ನೋಟಾ ಮತಗಳ ಚಲಾವಣೆಯಾಗಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ನೋಟಾಗೆ ಮತದಾನವಾದ ಜಿಲ್ಲೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ