Lok Sabha Election 2024: ಮೂರೂ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ನಾಗಲೋಟ
ಜೆಡಿಎಸ್ ಈ ಬಾರಿ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿತ್ತು. ಈ ಪೈಕಿ ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮುನ್ನಡೆಯಲ್ಲಿದ್ದಾರೆ. ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧಿತರಾಗಿರುವ ಪ್ರಜ್ವಲ್ ಮುನ್ನಡೆಯಲ್ಲಿರುವುದು ಗಮನಾರ್ಹ.
ಇತ್ತ ಮಂಡ್ಯದಲ್ಲಿ ನಿರೀಕ್ಷೆಯಂತೇ ಎಚ್ ಡಿ ಕುಮಾರಸ್ವಾಮಿ ಮುನ್ನಡೆಯಲ್ಲಿದ್ದಾರೆ. ಅದೂ 20 ಸಾವಿರಕ್ಕೂ ಅಧಿಕ ಮತದ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಚಂದ್ರು ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಮುನ್ನಡೆ ಕಂಡುಬಂದಿದೆ. ಈ ಮೂಲಕ ಜೆಡಿಎಸ್ ಕಣಕ್ಕಿಳಿಸಿದ ಮೂರೂ ಅಭ್ಯರ್ಥಿಗಳೂ ಮುನ್ನಡೆಯಲ್ಲಿರುವುದು ವಿಶೇಷ.