ಗುಲಬರ್ಗಾದ ಶಹಾಬಾದ್ ಗ್ರಾಮದಲ್ಲಿ ಹೇರ್ ಕಟ್ ಶಲೂನ್, ರಾಜ್ ಮೆನ್ಸ್ ಪಾರ್ಲರ್ ನಡೆಸುತ್ತಿರುವ ದಶರಥ್ ಕೂದಲು ಕತ್ತರಿಸಲು ವಿನೂತನ ಮಾರ್ಗವನ್ನು ಅನುಸರಿಸುತ್ತಾರೆ. ಮೇಣದಬತ್ತಿಯಿಂದ ಕೂದಲು ಕತ್ತರಿಸಿ ವಿಭಿನ್ನ ಶೈಲಿಯ ಕಟ್ಟಿಂಗ್ ಮಾಡುವ ಇವರ ಕೌಶಲ್ಯ ನಿಜಕ್ಕೂ ಮೆಚ್ಚುವಂತದ್ದು. ಕಳೆದ 6 ವರ್ಷಗಳಿಂದ ಅವರು ಈ ರೀತಿಯಲ್ಲಿ ಗ್ರಾಹಕರ ಕೂದಲನ್ನು ಕತ್ತರಿಸುತ್ತಾರೆ.