ಪಿಯು ಓದುತ್ತಿದ್ದ ಹುಡುಗಿ ಶವ ಬಾವಿಯಲ್ಲಿ : ಸಾವಿಗೆ ಏನು ಕಾರಣ?

ಬುಧವಾರ, 25 ಸೆಪ್ಟಂಬರ್ 2019 (18:05 IST)
ಪಿಯುಸಿ ಓದುತ್ತಿದ್ದ ಅಪ್ರಾಪ್ತ ಹುಡುಗಿಯೊಬ್ಬಳ ಶವ ಬಾವಿಯಲ್ಲಿ ಪತ್ತೆಯಾಗಿರೋದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಕಾಲೇಜಿನಲ್ಲಿ ಎಲ್ಲ ಚಟುವಟಿಕೆಗಳು, ಓದಿನಲ್ಲಿ ಮುಂದಿದ್ದ ಹುಡುಗಿ ಇದೀಗ ತನ್ನ ಮನೆಯ ಎದುರಿರೋ ಬಾವಿಯಲ್ಲಿ ಶವವಾಗಿದ್ದಾಳೆ.

ಶಿವಮೊಗ್ಗದ ಮಾದಾಪುರದಲ್ಲಿ ಘಟನೆ ನಡೆದಿದ್ದು, ಪೂಜಾ ಎಂಬೋಳ ಶವ ಪತ್ತೆಯಾಗಿದೆ.

ಎರಡ್ಮೂರು ದಿನಗಳ ಹಿಂದೆ ಪೂಜಾ ಕಾಣೆಯಾಗಿದ್ದಳು ಎನ್ನಲಾಗಿದ್ದು, ಆಕೆಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದುಕೊಂಡಿದೆ.

ಪೊಲೀಸರು ತನಿಖೆ ಕೈಗೊಂಡಿದ್ದು, ನಿಖರವಾದ ಕಾರಣ ಕಂಡು ಹಿಡಿಯಲು ಮುಂದಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ