ಬಿಜೆಪಿ- ಜೆಡಿಎಸ್ ಮೈತ್ರಿ ಚರ್ಚೆ ನಡುವೆ ಜೆಡಿಎಸ್ ಪ್ರಾಬಲ್ಯ ಕ್ಷೇತ್ರಗಳ ಬಗ್ಗೆ ಚಿತ್ತ ಹರಿಸಿದ ಬಿಜೆಪಿ

ಶನಿವಾರ, 29 ಜುಲೈ 2023 (14:39 IST)
ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ.ರಾಜ್ಯದ ಲೋಕಸಭಾ ಚುನಾವಣೆ ಉಸ್ತುವಾರಿ ಹೊತ್ತಿರುವ ವಿನೋದ್ ತಾವ್ಡೆ ಯಿಂದ ಮಹತ್ವದ ಸಭೆಯನ್ನ ಬಿಜೆಪಿ ಕಚೇರಿಯಲ್ಲಿ ನಡೆಸಲಾಗಿದೆ.ಮಾಜಿ ಸಚಿವ ಅಶ್ವಥ್ ನಾರಾಯಣ್ ಸೇರಿ ಮೂರು ಕ್ಷೇತ್ರಗಳ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದಾರೆ.ಈ ಮೂರು ಲೋಕಸಭಾ ಕ್ಷೇತ್ರಗಳಲ್ಲಿನ ಪಕ್ಷದ ಪರಿಸ್ಥಿತಿ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.
 
ಕಳೆದ ಚುನಾವಣೆಯಲ್ಲಿ ಈ ಲೋಕಸಭೆ ಕ್ಷೇತ್ರಗಳಿಂದ ಪಕ್ಷಕ್ಕೆ ಬಂದಿರುವ ಮತಗಳ ಮೇಲೆ ತಂತ್ರಗಾರಿಕೆ ನಡೆಸಲಾಗಿದೆ.ಚುನಾವಣೆ ಸಿದ್ದತೆ ಮಾಡಿಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸ್ತಿದ್ದು,ಮೈತ್ರಿ ಆದರೆ ಈ ಕ್ಷೇತ್ರಗಳನ್ನ ಬಿಟ್ಟುಕೊಡುವಂತೆ ಜೆಡಿಎಸ್ ಕೇಳ್ತಿದೆ.ಹೀಗಾಗಿ ಅದಕ್ಕೂ ಮುನ್ನ ಈ ಕ್ಷೇತ್ರಗಳ ವಸ್ತುಸ್ಥಿತಿ ತಿಳಿಯಲು ಬಿಜೆಪಿ ಮುಂದಾಗಿದೆ.ಮಹತ್ವ ಪಡೆದಿರುವ ಇಂದಿನ ವಿನೋದ್ ತಾವ್ಡೆ ನೇತೃತ್ವದ ಮೂರು ಲೋಕಸಭಾ ಕ್ಷೇತ್ರಗಳ ಸಿದ್ದತಾ ಸಭೆ ನಡೆಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ