G.M.ಸಿದ್ದೇಶ್ವರರಿಗೆ ರೇಣುಕಾಚಾರ್ಯ ಚೆಕ್ಮೇಟ್?
ದಾವಣಗೆರೆಯಲ್ಲಿ ಬಿಜೆಪಿ ಸಂಸದ G.M.ಸಿದ್ದೇಶ್ವರ್ ಹಣಿಯಲು ಸ್ವಪಕ್ಷದಿಂದಲೇ ತೆರೆಮರೆ ಕಸರತ್ತು ಆರಂಭವಾಗಿದೆ.. ಜಗಳೂರು ಮಾಜಿ ಶಾಸಕ ಗುರುಸಿದ್ಧನಗೌಡರನ್ನು ಭೇಟಿ ಮಾಡಿ ರೇಣುಕಾಚಾರ್ಯ ಸುದೀರ್ಘ ಚರ್ಚೆ ನಡೆಸಿದ್ದಾರೆ.. ಲೋಕಸಭಾ ಟಿಕೆಟ್ ಅನೌನ್ಸ್ ಆಗುವ ಮುನ್ನ ಸಂಸದರ ಜೊತೆ ಅಸಮಾಧಾನಗೊಂಡವರನ್ನು ಒಗ್ಗೂಡಿಸಲು ಮಾಜಿ ಶಾಸಕ M.P.ರೇಣುಕಾಚಾರ್ಯ ರಣತಂತ್ರ ರೂಪಿಸಿದ್ದಾರಾ ಎಂಬ ಅನುಮಾನ ಮೂಡಿದೆ.. G.M.ಸಿದ್ದೇಶ್ವರ್ ಅವರನ್ನು ಹಣಿಯಲು ಶತ್ರುವಿನ ಶತ್ರು ಮಿತ್ರ ಎಂಬ ಸೂತ್ರ ಅನುಸರಿಸಲಾಗ್ತಿದೆ ಎಂಬ ಮಾತುಗಳು ಕೇಳಿ ಬರ್ತಿವೆ.. ಸಿದ್ದೇಶ್ವರ ಜೊತೆ ಅಸಮಾಧಾನಗೊಂಡವರನ್ನು ರೇಣುಕಾಚಾರ್ಯ ಭೇಟಿ ಮಾಡುತ್ತಿದ್ದು, ಈ ಅನುಮಾನ ದಟ್ಟವಾಗುವಂತೆ ಮಾಡಿದೆ.. ರೇಣುಕಾಚಾರ್ಯ ಲೋಕಸಭಾ ಟಿಕೆಟ್ಗಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ.