ಆರೋಗ್ಯ ಕ್ಷೇತ್ರದಲ್ಲಿ ಐದಾರು ಪಟ್ಟು ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ : ಸುಧಾಕರ್
ಸೋಮವಾರ, 20 ಸೆಪ್ಟಂಬರ್ 2021 (14:57 IST)
ಬೆಂಗಳೂರು, ಸೆ.20 : ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಐದಾರು ಪಟ್ಟು ಸೌಲಭ್ಯಗಳನ್ನು ಸುಧಾರಿಸಲಾಗಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ.
ವಿಧಾನ ಪರಿಷತ್ನಲ್ಲಿ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಸಾಧನೆ ಮಾಡಲಾಗಿದೆ ಎಂದು ಹೇಳಿದರು. ಕೋವಿಡ್ಗೂ ಮೊದಲು ರಾಜ್ಯದಲ್ಲಿ 587 ಬೆಡ್ಗಳಿಗೆ ಮಾತ್ರ ಆಕ್ಸಿಜನ್ ಸೌಲಭ್ಯ ಇತ್ತು. ಈಗ 4200 ಆಕ್ಸಿಜನ್ ಒದಗಿಸಲಾಗಿದೆ.
ಒಟ್ಟು ಐಸಿಯು 4800 ಬೆಡ್ಗಳಿದ್ದವು ಅವುಗಳ ಸಂಖ್ಯೆ ಈಗ 30156 ಹಾಸಿಗೆಗಳಿಗೆ ಹೆಚ್ಚಾಗಿದೆ. ಕೋವಿಡ್ಗೆ ಮೊದಲು 720 ವೆಂಟಿಲೇಟರ್ಗಳಿದ್ದವು, ಈಗ ಅವು 3160ಕ್ಕೆ ಹೆಚ್ಚಾಗಿವೆ.ಆಮ್ಲಜನಕ ದಾಸ್ತಾನು 320 ಮೆಟ್ರಿಕ್ ಟನ್ಗೆ ಮಾತ್ರ ಅವಕಾಶ ಇತ್ತು, ಈಗ 1200 ಮೆಟ್ರಿಕ್ ಟನ್ ದಾಸ್ತಾನು ಮಾಡುವ ಸಾಮಥ್ರ್ಯ ಸೃಷ್ಟಿಸಲಾಗಿದೆ.ಒಟ್ಟು ಹಾಸಿಗೆಗಳು 1473 ಇತ್ತು, 50,960 ಹಾಸಿಗೆಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದರು.