1.24 ಲಕ್ಷ ಕೋಟಿ ದಾಟಲಿದೆ ಭಾರತದ ಫೋನ್ ರಫ್ತು!
ದೇಶದ ಮೊಬೈಲ್ ಫೋನ್ ರಫ್ತು ಈ ಹಣಕಾಸು ವರ್ಷದಲ್ಲಿ ಕಳೆದ ನವೆಂಬರ್‌ವರೆಗೆ 9 ಬಿಲಿಯನ್ ಯುಎಸ್ ಡಾಲರ್ ಗಡಿ ದಾಟಿದೆ. ಅಂದರೆ, 75 ಸಾವಿರ ಕೋಟಿ ರೂಪಾಯಿ ಬ್ಯುಸಿನೆಸ್ ಆಗಿದೆ ಎಂದು ಇಂಡಸ್ಟ್ರಿ ತಿಳಿಸಿದೆ. ಮೊಬೈಲ್ ರಪ್ತು ವಿಚಾರದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 6.2 ಬಿಲಿಯನ್ ಯುಎಸ್ ಡಾಲರ್ ಅಂದರೆ, 50 ಸಾವಿರ ಕೋಟಿ ರೂಪಾಯಿಯ ವ್ಯವಹಾರವಾಗಿತ್ತು ಎಂದು ಐಸಿಇಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.