INDvsSA test: ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಾಡಬಹುದಾದ ಬದಲಾವಣೆಗಳು

ಬುಧವಾರ, 3 ಜನವರಿ 2024 (08:50 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಕೇಪ್ ಟೌನ್ ನಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗುತ್ತಿದೆ.
 

ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದು. ಕಳೆದ ಪಂದ್ಯದಲ್ಲಿ ಭಾರತ ನಾಲ್ವರು ವೇಗಿಗಳು, ಓರ್ವ ಸ್ಪಿನ್ನರ್ ನೊಂದಿಗೆ ಕಣಕ್ಕಿಳಿದಿತ್ತು.

ಈ ಪಂದ್ಯದಲ್ಲೂ ಅದೇ ರೀತಿ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಬಹುದು. ಆದರೆ ಸ್ಪಿನ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾಗೆ ಅವಕಾಶ ನೀಡಬಹುದು. ಇಲ್ಲವೇ ಅಶ್ವಿನ್ ರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದರೆ ಪ್ರಸಿದ್ಧ ಕೃಷ್ಣರನ್ನು ಹೊರಗಿಡಬಹುದು.

ಬ್ಯಾಟಿಂಗ್ ವಿಭಾಗದಲ್ಲಿ ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ಇನ್ನೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಬೇಕಿದೆ. ಹಾಗಿದ್ದರೂ ಈ ವಿಭಾಗದಲ್ಲಿ ಯಾವುದೇ ಬದಲಾವಣೆ ಸಾಧ‍್ಯತೆ ಕಡಿಮೆ. ಮಧ‍್ಯಾಹ್ನ 1.30 ರಿಂದ ಪಂದ್ಯ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ