Rajnath Singh: ಭಾರತ ಯುದ್ಧವನ್ನು ಬೆಂಬಲಿಸುವುದಿಲ್ಲ, ನಮ್ಮ ತಂಟೆಗೆ ಬಂದರೆ ಬಿಡಲ್ಲ: ರಾಜನಾಥ ಸಿಂಗ್‌

Sampriya

ಗುರುವಾರ, 15 ಮೇ 2025 (16:18 IST)
Photo Credit X
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದಾಗಿ 26 ಪ್ರವಾಸಿಗರು ಮೃತಪಟ್ಟ ಘಟನೆ  ನಂತರ ಮೊದಲ ಬಾರಿ ಕೇಂದ್ರ ಸಚಿವ ರಾಜನಾಥ ಸಿಂಗ್ ಅವರು ಶ್ರೀನಗರ ಸೇನಾ ಕಚೇರಿಗೆ ಭೇಟಿ ನೀಡಿದ್ದಾರೆ.

ಈ ವೇಳೆ ಗಡಿ ನಿಯಂತ್ರಣಾ ರೇಖೆ ಸೇರಿದಂತೆ ಒಟ್ಟಾರೆ ಭದ್ರತಾ ಪರಿಸ್ಥಿತಿಯ ಬಗ್ಗೆ ಅವರು ಸೇನಾಧಿಕಾರಿಗಳಿಂದ ಮಾಹಿತಿ ಪಡೆದರು.

ಉಗ್ರರ ವಿರುದ್ಧದ ಹೋರಾಡಿ ಪ್ರಾಣತೆತ್ತ ವೀರ ಯೋಧರಿಗೆ ನನ್ನ ನಮನಗಳು. ಆಪರೇಷನ್‌ ಸಿಂಧೂರ ಬದ್ಧತೆಯಾಗಿದೆ, ಇದು ಉಗ್ರರ ವಿರುದ್ಧದ ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಭಯೋತ್ಪಾದನೆಯನ್ನು ಕೊನೆಗೊಳಿಸಲು ನಾವು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತೇವೆ ಎನ್ನುವುದನ್ನು ಇದು ಸಾಕ್ಷಿಯಾಗಿದೆ. ಪಾಕಿಸ್ತಾನದಲ್ಲಿ ಅಡಗಿರುವ ಭಯೋತ್ಪಾದಕರು ಮತ್ತು ಅವರ ಮಾಸ್ಟರ್‌ಮೈಂಡ್‌ಗಳು ಈಗ ಭಾರತೀಯ ಪಡೆಗಳ ಗುರಿಯಾಗಿದ್ದಾರೆ ಎಂದರು.

ಭಾರತ ಯಾವತ್ತಿಗೂ ಯುದ್ಧವನ್ನು ಬೆಂಬಲಿಸುವುದಿಲ್ಲ. ಆದರೆ ನಮ್ಮ ಸಾರ್ವಭೌಮತ್ವದ ಮೇಲೆ ದಾಳಿಯಾದಾಗ ನಾವು ಪ್ರತಿಕ್ರಿಯಿಸುತ್ತೇವೆ. ಕಳೆದ 35-40 ವರ್ಷಗಳಿಂದ ಭಾರತ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಿದೆ. ಪಹಲ್ಗಾಮ್‌ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದ ಜನ ಉಗ್ರರು ಮತ್ತು ಪಾಕಿಸ್ತಾನದ ಮೇಲೆ ತೋರಿಸಿರುವ ಸಿಟ್ಟಿನಿಂದಾಗಿಯೇ ಶತ್ರುಗಳನ್ನು ನಾಶ ಮಾಡಲು ಸಾಧ್ಯವಾಯಿತು ಎಂದುಕೊಳ್ಳುತ್ತೇನೆ. ಭಾರತದ ಈ ನಡೆಯನ್ನು ಶತ್ರುಗಳು ಎಂದಿಗೂ ಮರೆಯಲಾರರು ಎಂದು ಎಚ್ಚರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ