ಸಂಸ್ಕೃತವು ವಿಶ್ವದ ಹಲವು ಭಾಷೆಗಳ ತಾಯಿ. ಹೇರಳ ಭಾಷಾ ಸಂಪನ್ಮೂಲವನ್ನು ಹೊಂದಿರುವ ಸಂಸ್ಕೃತವನ್ನು ಸಂಕುಚಿತ ದೃಷ್ಟಿಕೋನದಿಂದ ನೋಡುವ ಮನೋಭಾವ ತೊಲಗಬೇಕು. ಭಾಷೆಯು ಸರ್ವವ್ಯಾಪಿ, ಸರ್ವಸ್ಪರ್ಶಿಯಾದಲ್ಲಿ ದೇಶದ ಸಂಸ್ಕೃತಿಯೂ ಶ್ರೀಮಂತಗೊಳ್ಳುತ್ತದೆ. ಹಾಗಾಗಿ, ಈ ಭಾಷೆಯ ಪ್ರಸಾರಕ್ಕೆ ವಿದ್ವಾಂಸರು ಹಾಗೂ ವಿಶ್ವವಿದ್ಯಾಲಯ ಶ್ರಮಿಸಬೇಕು ಎಂದರು.
ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಭಟ್ ಕೋಟೆಮನೆ, ಸರ್ವರ ಕಲ್ಯಾಣ ಸಂಸ್ಕೃತದ ಆಶಯ. ಕನ್ನಡದ ವೈಜ್ಞಾನಿಕ ಹಾಗೂ ವೈಚಾರಿಕ ಸಾಹಿತ್ಯಕ್ಕೆ ಸಂಸ್ಕೃತದ ಕೊಡುಗೆ ಮಹತ್ವದ್ದು. ಸಂಸ್ಕೃತ ವಿಶ್ವವಿದ್ಯಾಲಯವು ಬೋಧನೆಯ ಜೊತೆಗೆ ಸಂಶೋಧನೆಯನ್ನೂ ಕೈಗೊಳ್ಳಬೇಕು ಎಂದು ಹೇಳಿದರು.