ಪಾಕ್ ನಲ್ಲಿ ಹಾಡು ಹಾಡಿದ ಭಾರತೀಯ ಗಾಯಕನಿಗೆ ಎಂಥಾ ಶಿಕ್ಷೆ

ಬುಧವಾರ, 14 ಆಗಸ್ಟ್ 2019 (16:55 IST)
ಭಾರತ – ಪಾಕಿಸ್ತಾನ ನಡುವೆ ಈಗಾಗಲೇ ಕಾಶ್ಮೀರ ವಿಷಯ ವಿವಾದವೆಬ್ಬಿಸಿದೆ. ಈ ನಡುವೆ ಪಾಕ್ ಗೆ ಹೋಗಿ ಹಾಡು ಹಾಡಿರೋ ಭಾರತೀಯ ಸಿಂಗರ್ ಗೆ ತಕ್ಕ ಶಾಸ್ತಿ ಮಾಡಲಾಗಿದೆ.

ಪಾಕಿಸ್ತಾನ ಈಗಾಗಲೇ ತನ್ನ ನೆಲದಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನ ಹಾಗೂ ಚಿತ್ರಗೀತೆಗಳನ್ನು ನಿಷೇಧ ಮಾಡಿದೆ. ಈ ನಡುವೆ ಭಾರತೀಯ ಸಿಂಗರ್ ಮಿಕಾ ಸಿಂಗ್ ಪಾಕ್ ನಲ್ಲಿ ಸಂಗೀತ ಸಮಾರಂಭ ನೀಡಿದ್ದಾರೆ.

ಮಿಕಾ ಸಿಂಗ್ ಹಾಡಿರೋ ವಿಡಿಯೋ ಪಾಕಿಸ್ತಾನದಿಂದ ವೈರಲ್ ಆಗುತ್ತಿರೋವಂತೆ ಭಾರತೀಯ ಚಲನಚಿತ್ರರಂಗದಿಂದ ಈ ಸಿಂಗರ್ ನನ್ನು ನಿಷೇಧ ಮಾಡಲಾಗಿದೆ.

ಮಿಕಾ ಸಿಂಗ್  ಜೊತೆಗೆ ಯಾರೂ ಸಂಗೀತ ಅಥವಾ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಒಡನಾಟ ಇಟ್ಟುಕೊಳ್ಳಬಾರದು. ಅವರನ್ನು ನಿಷೇಧಿಸಲಾಗಿದೆ. ಈ ಸೂಚನೆ ಮೀರಿ ಅವರೊಂದಿಗೆ ಕಾರ್ಯಕ್ರಮ ನೀಡೋದಾಗಲಿ ಅಥವಾ ಮತ್ತಿತರ ಚಟುವಟಿಕೆಗಳನ್ನ ನಡೆಸಿದರೆ ಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ