ಮೋದಿ ಬಯಸಿದ್ರೆ ಮಾತ್ರ ಜಮ್ಮು-ಕಾಶ್ಮೀರ ವಿವಾದದ ಮಧ್ಯಸ್ಥಿಕೆ ವಹಿಸುವೆ ಎಂದ ಅಮೆರಿಕಾ ಅಧ್ಯಕ್ಷ
ಶುಕ್ರವಾರ, 2 ಆಗಸ್ಟ್ 2019 (11:17 IST)
ನವದೆಹಲಿ : ಜಮ್ಮು-ಕಾಶ್ಮೀರ ವಿವಾದ ಬಗೆಹರಿಸುವ ಕುರಿತು ಮಧ್ಯಸ್ಥಿಕೆ ವಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಬಯಸಿದ್ರೆ ಮಾತ್ರ ಮಧ್ತಸ್ಥಿಕೆ ವಹಿಸುವುದಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಕಾಶ್ಮೀರದ ಗಡಿ ಸಮಸ್ಯೆ ಶುರುವಾಗಿ ಹಲವಾರು ವರ್ಷಗಳೇ ಕಳೆದಿವೆ. ಈ ಸಮಸ್ಯೆ ಜಾಗತಿಕ ಮಟ್ಟದಲ್ಲೂ ಬಾರೀ ಸುದ್ದಿಯಾಗಿದೆ. ಆದಕಾರಣ ಜಿ20 ಶೃಂಗಸಭೆ ವೇಳೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಮ್ಮು-ಕಾಶ್ಮೀರ ಸಮಸ್ಯೆಯ ಕುರಿತು ಮಧ್ಯಸ್ಥಿಕೆ ವಹಿಸಲು ಮೋದಿ ಮನವಿ ಮಾಡಿದ್ರು ಎಂಸು ಹೇಳಿದ್ದರು. ಆದರೆ ಟ್ರಂಪ್ ಹೇಳಿಕೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿತ್ತು.
ಆದರೆ ಇದೀಗ ಮತ್ತೆ ಈ ವಿಚಾರವಾಗಿ ಮಾತನಾಡಿದ ಟ್ರಂಪ್, ನೆರೆಯ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ತಮ್ಮ ನಡುವಿನ ಬಿಕ್ಕಟ್ಟನ್ನು ಆದಷ್ಟು ಬೇಗ ಬಗೆಹರಿಸಿಕೊಂಡು ಸೌಹಾರ್ದತೆಯಿಂದ ಇರುವುದು ಉತ್ತಮ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಅತ್ಯುತ್ತಮ ವ್ಯಕ್ತಿಗಳು. ಆ ಎರಡೂ ದೇಶಗಳು ಕಾಶ್ಮೀರ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಬಯಸಿದಲ್ಲಿ ಅಮೆರಿಕ ಸಹಾಯ ಮಾಡಲು ಸಿದ್ಧ. ಹೀಗಾಗಿ, ಧಾನಿ ಮೋದಿ ಬಯಸಿದ್ರೆ ಮಾತ್ರ ಮಧ್ತಸ್ಥಿಕೆ ವಹಿಸುವೆ. ಆದ್ದರಿಂದ ಕಾಶ್ಮೀರದ ಗಡಿಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರದ ಮೇಲೆ ನಿಂತಿದೆ ಎಂದು ಟ್ರಂಪ್ ಹೇಳಿದ್ದಾರೆ.