ದರ್ಶನ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಇಂದ್ರಜಿತ್ ಭೇಟಿ
ಅದರ ಬೆನ್ನಲ್ಲೇ ಇದೀಗ ದರ್ಶನ್ ಮೇಲೆ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್-ಕುಮಾರಸ್ವಾಮಿ ಭೇಟಿ ಮಾಡಿರುವ ಫೋಟೋವೊಂದು ವೈರಲ್ ಆಗಿದೆ. ಹೀಗಾಗಿ ದರ್ಶನ್ ವಿರುದ್ಧದ ಆರೋಪದ ಹಿಂದೆ ಕುಮಾರಸ್ವಾಮಿ ಬೆಂಬಲ ಇಂದ್ರಜಿತ್ ಗಿದೆಯೇ ಎಂಬ ಅನುಮಾನ ಮೂಡಿಸಿದೆ. ದರ್ಶನ್ ಕೂಡಾ ಮಾಧ್ಯಮಗಳ ಮುಂದೆ ಮಾತನಾಡುವಾಗ ತಮ್ಮ ವಿರುದ್ಧದ ಈ ಎಲ್ಲಾ ಆರೋಪಗಳ ಹಿಂದೆ ಇಂದ್ರಜಿತ್ ಗೆ ಯಾರೋ ಪ್ರಭಾವಿಗಳದ್ದೇ ಕುಮ್ಮಕ್ಕಿದೆ ಎಂದಿದ್ದರು. ಆದರೆ ಈಗ ಹರಿದಾಡುತ್ತಿರುವ ಫೋಟೋ ಈಗಿನದ್ದೇ ಅಥವಾ ಹಳೆಯ ಫೋಟೋವೇ ಎಂಬುದು ಸ್ಪಷ್ಟವಾಗಿಲ್ಲ.