ಜಮ್ಮು ಕಾಶ್ಮಿರದಲ್ಲಿ ಉಗ್ರರ ಹಾವಳಿ ಹೆಚ್ಚಳ : ಉಗ್ರರ ನರಮೇಧಕ್ಕೆ ಸೇನೆ ಸಜ್ಜು

ಶುಕ್ರವಾರ, 8 ಜುಲೈ 2016 (15:56 IST)
ಜಮ್ಮು ಕಾಶ್ಮಿರದ ಕಣಿವೆಯಲ್ಲಿ ಪ್ರಸಕ್ತ ವರ್ಷದ ಅವಧಿಯಲ್ಲಿ ಗಡಿ ನಿಯಂತ್ರಣ ರೇಖೆ ಮಾರ್ಗವಾಗಿ 100ಕ್ಕೂ ಹೆಚ್ಚು ಉಗ್ರರು ದೇಶದೊಳಗೆ ನುಸುಳಿರುವುದು ಆತಂಕ ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ.
 
ಗಡಿ ನಿಯಂತ್ರಣ ಉಗ್ರರ ನುಸುಳುವಿಕೆ ತಡೆ ಅಧಿಕಾರಿ ವರದಿಗಳ ಪ್ರಕಾರ, ಲಷ್ಕರ್-ಎ-ತೊಯಿಬಾ, ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗಳ 100 ಕ್ಕೂ ಹೆಚ್ಚು ಉಗ್ರರು ಗುಲ್‌ಮಾರ್ಗ್ ಮತ್ತು ಬಾರಾಮುಲ್ಲಾದ ಬೋನಿಯಾರ್‌ ಮಾರ್ಗವಾಗಿ ದೇಶದೊಳಗೆ ನುಸುಳುತ್ತಿದ್ದಾರೆ ಎನ್ನಲಾಗಿದೆ.
 
ಹಲವು ದಶಕಗಳ ಹಿಂದೆ ಬುಡಕಟ್ಟು ಸಮುದಾಯದ ಜನರು ಪಾಕಿಸ್ತಾನದಿಂದ ಕಾಶ್ಮಿರವನ್ನು ಪ್ರವೇಶಿಸಲು ಇದೇ ಮಾರ್ಗವನ್ನು ಅನುಸರಿಸುತ್ತಿದ್ದರು ಎಂದು ಮಾಜಿ ಸೇನಾಧಿಕಾರಿಗಳು ತಿಳಿಸಿದ್ದಾರೆ. 
 
ಜಮ್ಮು ಕಾಶ್ಮಿರದಲ್ಲಿ ದಕ್ಷಿಣ ಕಾಶ್ಮಿರ ಉಗ್ರರ ತಾಣವಾಗಿ ಹೊರಹೊಮ್ಮಿದೆ. ಭದ್ರತಾ ಪಡೆಗಳು 20-25 ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ. ಕಳೆದ ಜೂನ್ 30 ರಿಂದ ಅಂದಾಜು 30 ಉಗ್ರರು ಕಾಶ್ಮಿರದೊಳಗೆ ನುಸುಳಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ