ಬಡವರ ಪಾಲಿನ ತಾಯಿ ಇನ್ಫೋಸಿಸ್ ಸುಧಾಮೂರ್ತಿ

ಸೋಮವಾರ, 15 ನವೆಂಬರ್ 2021 (14:43 IST)
ಇದೇ ನವೆಂಬರ್ ೧೭ ರಿಂದ ನೂತನ ಆಸ್ಪತ್ರೆ ಕಾರ್ಯಾರಂಭವಾಗಲಿದೆ. ತುರ್ತು ಚಿಕಿತ್ಸೆಗೆ ಪ್ರತಿ ೫ ನಿಮಿಷಕ್ಕೆ( ರಾತ್ರಿ ವೇಳೆ) ಆಸ್ಪತ್ರೆಯತ್ತ ಹೃದ್ರೋಗಿಗಳು ಆಗಮಿಸುತ್ತಿರುವ ಹಿನ್ನೆಲೆ ಆಸ್ಪತ್ರೆ ಮೇಲಿನ ಒತ್ತಡ ತಗ್ಗಿಸಲು ೩೫೦ ಬೆಡ್ ನ ಆಸ್ಪತ್ರೆ ನಿರ್ಮಾಣ ಮಾಡಿಕೊಡಲಿದೆ. ಇಂದು ನೂತನ ಆಸ್ಪತ್ರೆ ಕಾರ್ಯಾರಂಭ ಕುರಿತು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ‌.ಎನ್.ಮಂಜುನಾಥ್ (Dr CN Manjunarth)ಮಾಹಿತಿ ಹಂಚಿಕೊಂಡರು.ಹೊಸ ಜಯದೇವ ಆಸ್ಪತ್ರೆಯ ಘಟಕ ನಿರ್ಮಾಣವಾದ ಸಂಗತಿಯೇ ರೋಚಕ. ಸುಧಾಮೂರ್ತಿಯ ಕೊಡುಗೈ ದಾನಕ್ಕೆ ಜಯದೇವ ಹೊಸ ಘಟಕ ಸಾಕ್ಷಿ. ಜಯದೇವಕ್ಕೆ ಬರುವ ಬಡ ರೋಗಿಗಳನ್ನ ನೋಡಿ ಆಸ್ಪತ್ರೆ ನಿರ್ಮಾಣದ ಸಾಹಸಕ್ಕೆ ಸುಧಾಮೂರ್ತಿ ಮುಂದಾಗಿದ್ದರು. ೨೦೧೮ರಲ್ಲಿ ಜಯದೇವ ಆಸ್ಪತ್ರೆಗೆ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ (N.R.Narayana Murthy And Sudha Murty) ಭೇಟಿ ನೀಡಿದ್ದರು. ಜಯದೇವ ರೋಗಿಗಳ ಸಂಖ್ಯೆ ಹಾಗು ಸ್ಥಿತಿಗತಿ ನೋಡಿದ್ರು. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಬರುವುದನ್ನು ನೋಡಿ ಹೋಗಿದ್ದರು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ ಮಜುನಾಥ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ