125ನೇ ವಾರ್ಷಿಕೋತ್ಸವ ಆಚರಿಸಲಿರುವ ಮಿಂಟೋ ಆಸ್ಪತ್ರೆ
ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಪ್ರತಿಷ್ಟಿತ ಕಣ್ಣಾಸ್ಪತ್ರೆ ಮಿಂಟೊ 125ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿದೆ. ಚಿಕ್ಕಪೇಟೆಯಲ್ಲಿ ಪುಟ್ಟ ಕ್ಲಿನಿಕ್ ಆಗಿ ಶುರುವಾದ ಮಿಂಟೋ ನಂತರ ಲಾಲ್ ಭಾಗಿನ ಪುಟ್ಟ ಲಾಡ್ಜ್ ಗೆ ಸ್ಥಳಾಂತರಗೊಂಡಿತ್ತು.ಅಂತಾರಾಷ್ತ್ರೀಯ ಗುಣಮಟ್ತದ ಚಿಕಿತ್ಸೆ ಲಭ್ಯವಿರುವುದರಿಂದ ವರ್ಷಕ್ಕೆ ೧ ಲಕ್ಷಕ್ಕೂ ಅಧಿಕ ರೋಗಿಗಳು ಇಂದು ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದು ಡಾ. ಸುಜಾತಾ ರಾಥೋಡ್ ಮಾಹಿತಿ ಹಂಚಿಕೊಂಡಿದ್ದಾರೆ. 1898ರಲ್ಲಿ ಪ್ಲೇಗ್ ಸಾಂಕ್ರಾಮಿಕ ತಲೆದೋರಿದ್ದ ಸಮಯದಲ್ಲಿ ಮಿಂಟೊ ಆಸ್ಪತ್ರೆ ಕ್ವಾರಂಟೈನ್ ಆಗಿ ಬಳಕೆಯಾಗಿತ್ತು. ಪ್ರಸ್ತುತ ಕೊರೊನಾ ಸಂದರ್ಭದಲ್ಲಿ ಮ್ಯುಕೋರ್ ಮಯೋಸಿಸ್ (ಬ್ಲ್ಯಾಕ್ ಫಂಗಸ್) ರೋಗಿಗಳ ಚಿಕಿತ್ಸೆಗಾಗಿ ಬಳಕೆಯಾಗಿತ್ತು.