ಸ್ಟ್ರೆಚರ್ ಸಿಗದೇ ಗಂಡನನ್ನ ಎಳೆದೊಯ್ದ ಪತ್ನಿ.. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ
ಶುಕ್ರವಾರ, 2 ಜೂನ್ 2017 (12:44 IST)
ರಾಜಕಾರಣಿಗಳು ಎಷ್ಟೇ ಅಭಿವೃದ್ಧಿಯ ಭಾಷಣ ಹೊಡೆದರೂ ನಮ್ಮ ವೈದ್ಯಕೀಯ ವ್ಯವಸ್ಥೆ ಮಾತ್ರ ಸುಧಾರಿಸಿಲ್ಲ ಎಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿ. ರೋಗಿಯನ್ನ ಕರೆದೊಯ್ಯಲು ಸ್ಟ್ರೆಚರ್ ಸಿಗದೇ ರೋಗಿಯ ಪತ್ನಿ ಕಾಲಿಡಿದು ಎಕ್ಸ್ ರೇ ಕೊಠಡಿಗೆ ಕರೆದೊಯ್ದಿರುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಕಾಲಿಗೆ ಗಾಯಮಾಡಿಕೊಂಡಿದ್ದ ಅಮೀರ್ ಸಾಬ್ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದರು. ಅಮೀರ್ ಅವರಿಗೆ ಎಕ್ಸ್ ರೇ ಅಗತ್ಯವಿದ್ದರಿಂದ ಎಕ್ಸ್ ರೇ ಕೊಠಡಿಗೆ ತೆರಳಲು ಸ್ಟ್ರೆಚರ್ ಸಿಗಲಿಲ್ಲ. ಹೀಗಾಗಿ, ಪತ್ನಿಯೇ ಕಾಲು ಹಿಡಿದು ಎಳೆದೊಯ್ದ ಅಮಾನವೀಯ ಘಟನೆ ನಡೆದಿದೆ.
ಈ ಕುರಿತು,ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ವರ್ತನೆಯನ್ನ ಖಂಡಿಸಿದ್ದಾರೆ. ವರದಿ ತರಿಸಿಕೊಂಡು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಆರೋಗ್ಯ ಸಚಿವ ರಮೇಶ್ ಕುಮಾರ್ ಘಟನೆ ಕುರಿತು ವಿಷಾಧ ವ್ಯಕ್ತಪಡಿಸಿದ್ದು, ಇಂಥಾ ಅವಿವೇಕಿಗಳ ತಗ್ಗಿಸುವಂತಾಗಿದೆ ಎಂದಿದ್ದಾರೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ..ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/