ಮೆಗ್ಗಾನ್ ಬಳಿಕ ವಿಕ್ಟೋರಿಯಾದಲ್ಲಿ ಅಮಾನವೀಯ ಘಟನೆ.. ಬೆಡ್ ನೀಡದೇ ಅಲೆದಾಡಿಸಿದ್ರಾ ವೈದ್ಯರು..?
ಶನಿವಾರ, 3 ಜೂನ್ 2017 (08:32 IST)
ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗೆ ಬೆಡ್ ನೀಡದೇ ಅಮಾನವೀಯವಾಗಿ ನಡೆಸಿಕೊಂಡ ಆರೋಪ ಕೇಳಿಬಂದಿದೆ.
ಪೈಲ್ಸ್`ನಿಂದ ಬಳಲುತ್ತಿದ್ದ ತುಮಕೂರು ಮೂಲದ ಮೊಹಮ್ಮದ್ ಶಬ್ಬೀರ್ ನಿನ್ನೆ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ಬಂದಿದ್ದರು. ಆದರೆ, ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಬೆಡ್ ನೀಡದೇ ನೆಲದ ಮೇಲೆ ಮಲಗುವಂತೆ ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳುವಂತೆ ರೆಫರ್ ಮಾಡಿದ್ದಾರೆ.
ರೋಗಿಯನ್ನ ಕರೆದುಕೊಂಡು ಕೆ.ಸಿ. ಜನರಲ್`ಗೆ ಹೋದರೆ ಇದು ರೆಫರ್ ಮಾಡಿರುವ ಸ್ಲಿಪ್ ಅಲ್ಲ, ಸ್ವಯಂಪ್ರೇರಿತವಾಗಿ ಡಿಸ್ಚಾರ್ಜ್`ಗೆ ಬರೆಸಿಕೊಂಡಿರುವ ಸ್ಲಿಪ್ ಎಂದು ಹೇಳಿದ್ದಾರೆ. ಅಡ್ಮಿಸನ್`ಗೆ ನಿರಾಕರಿಸಿದ್ದಾರೆ.
ಇದರಿಂದ ಆಘಾತಗೊಂಡ ರೋಗಿಯ ಸಂಬಧಿಕರು ಬಳಿಕ ಮರಳಿ ವಿಕ್ಟೋರಿಯಾ ಆಸ್ಪತ್ರೆಗೆ ರೋಗಿಯನ್ನ ಕರೆ ತಂದಿದ್ದಾರೆ. ಅಡ್ಮಿಟ್ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೂ ಬೆಡ್ ನೀಡದ ವೈದ್ಯರು ಮಾಧ್ಯಮ ಪ್ರತಿನಿಧಿಗಳನ್ನ ಕಂಡು ಬೆಡ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
. ವೆಬ್ದುನಿಯಾಫ್ಯಾಂಟಸಿಕ್ರಿಕೆಟ್ಲೀಗ್: ಆಡಿ 2.5 ಲಕ್ಷರೂ. ಮೌಲ್ಯದಬಹುಮಾನಗೆಲ್ಲಿ..ವೆಬ್ದುನಿಯಾಫ್ಯಾಂಟಸಿಲೀಗ್`ನಲ್ಲಿಭಾಗವಹಿಸಲುಈಲಿಂಕ್ಕ್ಲಿಕ್ಮಾಡಿ.. http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ