ಸಚಿವ ರಾಮಲಿಂಗ ರೆಡ್ಡಿ ಯಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ

ಶುಕ್ರವಾರ, 26 ಮೇ 2023 (19:38 IST)
ರಾಜ್ಯದಲ್ಲಿ‌ ಮತ್ತೆ ಇಂದಿರಾ ಕ್ಯಾಂಟೀನ್ ಯೋಜನೆ ಪುನರಾರಂಭ ಗೊಂಡಿದೆ.  ಸಚಿವ ರಾಮಲಿಂಗ ರೆಡ್ಡಿ ಇಂದು ಬನ್ನಪ್ಪ ಪಾರ್ಕ್ ಹಡ್ಸನ್ ವೃತ್ತದ ಬಳಿಯ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ್ದು,ಕ್ಯಾಂಟೀನ್ ನ ಕಾರ್ಯ ನಿರ್ವಹಣೆ ಮತ್ತು ಆಹಾರ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ,ಇಂದಿರಾ ಕ್ಯಾಂಟೀನ್ ನಿಂದ ಬಡವರ ಹೊಟ್ಟೆ ತುಂಬಿದಂತಾಗಿದೆ, ಇಂದಿರಾ ಗಾಂಧಿ ಹೆಸರಿಟ್ಟಿರೋದು ಬಿ ಜೆ ಪಿ ಅವರಿಗೆ ಸಹಿಸೋಕೆ ಆಗ್ತಿಲ್ಲ, ಮೊದಲಿಗೆ ಇಂದಿರಾ ಕ್ಯಾಂಟೀನ್ ಹೆಸರಿಟ್ಟಿದ್ದು ನಮ್ಮ ಪಕ್ಷದಿಂದ ಬಿ ಜೆ ಪಿ ಗೆ ಹೋಗಿರುವ ಮಂತ್ರಿಗಳೇ, ಈಗ ಪ್ರಧಾನಿ ಮೋದಿ ಹೆಸರಲ್ಲಿ ಎಷ್ಟು ಸ್ಕೀಮ್ ಗಳಿವೆ ಅದನ್ನ ನಾವು ಯಾರಾದ್ರೂ ಬೇಡ ಅಂತೀವ ಅಂತ ಬಿಜೆಪಿ ವಿರುದ್ಧ ರಾಮಲಿಂಗ ರೆಡ್ಡಿ ಕಿಡಿ  ಕಾರಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ