ಕೊಪ್ಪಳ: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ಪಿಪಿ ಪಕ್ಷದ್ದೇ ಹವಾ ಸೃಷ್ಟಿಯಾಗಿದ್ದು, ಪಕ್ಷದ ಸಂಸ್ಥಾಪಕರಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿನಿಂತರೂ ಸುದ್ದಿ, ಕುಳಿತರೂ ಸುದ್ದಿಯಾಗುತ್ತಿದ್ದಾರೆ.
ಮತ್ತೊಂದು ಅಚ್ಚರಿ ಸಂಗತಿ ಎಂದರೆ ರೆಡ್ಡಿಯ ಚಲನವಲನದ ಮೇಲೆ ರಾಜ್ಯ ಗುಪ್ತಚರ ಇಲಾಖೆ ಹಾಗೂ ಸಿಬಿಐ ಕಣ್ಣಿಟ್ಟಿದೆ. 2008ರಲ್ಲಿ ಆಪರೇಷನ್ ಕಮಲ ಎನ್ನುವ ಖ್ಯಾತಿ ಪಡೆದುಕೊಂಡಿದ್ದ ರಾಜ್ಯ ಬಿಜೆಪಿ ಪಕ್ಷವು ಅಧಿಕಾರ ಪಡೆದುಕೊಳ್ಳಲು ಜನಾರ್ದನ ರೆಡ್ಡಿಯವರು ಪ್ರಮುಖ ಪಾತ್ರ ವಹಿಸಿದ್ದರು.
ಇದಾದ ಬಳಿಕ ರೆಡ್ಡಿ ಅಕ್ರಮ ಗಣಿಗಾರಿಕೆ, ಬೇಲ್ ಡೀಲ್ ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ಸುಮಾರು ವರ್ಷಗಳ ಕಾಲ ಜೈಲು ಸೇರಿದ್ದರು. ನಂತರ ಜನಾರ್ದನ ರೆಡ್ಡಿಯವರು ಸುಪ್ರೀಂ ಕೋರ್ಟ್ನ ಷರತ್ತು ಬದ್ಧ ಅನುಮತಿಯ ಮೇರೆಗೆ ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆ.