ಅಂತರ ವಿಶ್ವವಿದ್ಯಾಲಯದ ಕ್ರಾಸ್-ಕಂಟ್ರಿ ಚಾಂಪಿಯನ್‍ಶಿಪ್ ಓಟ ಅ.4ಕ್ಕೆ

ಬುಧವಾರ, 3 ಅಕ್ಟೋಬರ್ 2018 (19:09 IST)
ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್-ಕಂಟ್ರಿ (ಪುರುಷ ಮತ್ತು ಮಹಿಳೆ) ಚಾಂಪಿಯನ್‍ಶಿಪ್-2018-19ರ ಪ್ರಯುಕ್ತ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಿಂದ ಪ್ರಾರಂಭಗೊಳ್ಳುವ ಚಾಂಪಿಯನ್‍ಶಿಪ್‍ನ ಓಟಕ್ಕೆ ಅಕ್ಟೋಬರ್ 4 ರಂದು ಚಾಲನೆ ಸಿಗಲಿದೆ.

ಅಂದು ಬೆಳಿಗ್ಗೆ 6 ಗಂಟೆಗೆ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಲಿದ್ದಾರೆ.  ಸಚಿವರ ಜೊತೆಗೆ ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ರವೀಂದ್ರ ಎಂ. ಕುರುಬಗಟ್ಟಿ, ಎಸ್.ಎನ್. ಆನಂದಕುಮಾರ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಜಯಭಾಸ್ಕರ್, ವಿದ್ಯಾವಿಷಯಕ ಸದಸ್ಯ ಇರ್ಫಾನ್ ಅಹ್ಮದ್ ಸರಡಗಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್. ನಿರಂಜನ್  ಅಧ್ಯಕ್ಷತೆ ವಹಿಸಲಿದ್ದಾರೆ.

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕ್ರಾಸ್-ಕಂಟ್ರಿ (ಪುರುಷ-ಮಹಿಳೆ) ಚಾಂಪಿಯನ್‍ಶಿಪ್‍ನಲ್ಲಿ ಭಾರತ ದೇಶದ 140 ವಿಶ್ವವಿದ್ಯಾಲಯಗಳಿಂದ 1500 ಪುರುಷ ಮತ್ತು 1200 ಮಹಿಳಾ ಕ್ರೀಡಾಪಟುಗಳು ಮತ್ತು 400 ತಂಡದ ವ್ಯವಸ್ಥಾಪಕರು, ತರಬೇತುದಾರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರಾಸ್-ಕಂಟ್ರಿ  (ಪುರುಷ) ತಂಡದ ಸದಸ್ಯರಾಗಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕ್ರಾಸ್-ಕಂಟ್ರಿ ಚಾಂಪಿಯನ್‍ಶಿಪ್‍ದಲ್ಲಿ ಪ್ರತಿನಿಧಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕøರಾದ ಪೊಲೀಸ್ ಇಲಾಖೆಯ ಶಿವಪ್ಪ ಮತ್ತು ಅಣ್ಣೆಪ್ಪ ಗಂದೆಣ್ಣನವರ ಹಾಗೂ ಜೆಸ್ಕಾಂನ ಶಿವಾನಂದ ಸುಗೂರ ಅವರನ್ನು ಸನ್ಮಾನಿಸಲಾಗುವುದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ