ಪ್ರಪಂಚದ 144 ಕಂಪನಿಗಳು ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.ಇನ್ನೋವೇಶನ್ ಆಫ್ ಇನ್ ಸ್ಕೂಲ್ ಮಿಲ್ಕ್ ಪ್ರೋಗ್ರಾಂ ವತಿಯಿಂದ K M F ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅವರು ಪ್ರಶಸ್ತಿ ಸ್ವೀಕರಿಸಿದಾರೆ.ರಾಜ್ಯ ಸರ್ಕಾರ ಹಾಗೂ ಕೆ ಎಂ ಎಫ್ ಸಹಯೋಗದಲ್ಲಿ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಅಪೌಷ್ಠಿಕ ನಿವಾರಣೆಗಾಗಿ ಕ್ಷೀರ ಭಾಗ್ಯ ಯೋಜನೆ ಜಾರಿ ತರಲಾಗಿತ್ತು.9 ವರ್ಷ ಪೂರೈಸಿದ ಕ್ಷೀರ ಭಾಗ್ಯಕ್ಕೆ ಪ್ರಶಸ್ತಿ ಲಭಿಸಿದೆ.
1 ರಿಂದ 10ನೇ ತರಗತಿಯ ಸುಮಾರು 64 ಲಕ್ಷ ಮಕ್ಕಳಿಗೆ ಉಚಿತ ಹಾಲು ವಿತರಣೆ ಮಾಡುತ್ತಿದ್ದು,ರಾಜ್ಯದ 64 ಸಾವಿರ ಅಂಗನವಾಡಿಯಲ್ಲಿ 6 ತಿಂಗಳಿಂದ 6 ವರ್ಷದ 39.50 ಲಕ್ಷ ಮಕ್ಕಳಿಗೆ ವಾರದ 5 ದಿನಗಳ ಕಾಲ 150 ml ಉಚಿತ ಹಾಲು ವಿತರಣೆ ಮಾಡಲಾಗ್ತಿದೆ.ಸುಮಾರು ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಈ ಕ್ಷೀರ ಭಾಗ್ಯ ಯೋಜನೆ ಜಾರಿಯಾಗಲಿದೆ