ಕೇಂದ್ರ ಸರ್ಕಾರದ ವಿರುದ್ದ ಹಿಂದಿ ದಿವಸ್ ವಿರೋಧಿಸಿ ವಾಟಾಳ್ ನಾಗರಾಜ್ ಧರಣಿ

ಬುಧವಾರ, 14 ಸೆಪ್ಟಂಬರ್ 2022 (20:46 IST)
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಿಂದಿ ದಿವಾಸ್ ವಿರೋಧಿಸಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಧರಣಿ ನಡೆಸಲಾಗ್ತಿದೆ.ಸುಮಾರು ನೂರು ಜನರ ಸಮುಖದಲ್ಲಿ ಭೂತ ದಹನವಾಗ್ತಿದ್ದು .ಭೂತ ದಹನಕ್ಕೆ ಎಲ್ಲ ಸಿದ್ದತೆಯನ್ನ ಸಂಗಡಿಗರು  ಮಾಡಿಕೊಂಡಿದ್ದಾರೆ.
 
ವಾಟಾಳ್ ನಾಗರಾಜ್ ಜೊತೆಗೆ ಕೈಗೂಡಿಸಿರುವ ಹಲವಾರು ಸಂಘಟನೆಗಳು ಕನ್ನಡ ಉಳಿಸುವುದು ಬೆಳೆಸುವುದು ನಮ್ಮ ಕರ್ತವ್ಯ ಎಂದು ಘೋಷಣೆ ಕೂಗಿ ಧರಣಿ ನಡೆಸ್ತಿದ್ದಾರೆ.
 
ಹಿಂದಿ ದಿವಸ್ ವಿರೋಧಿಸಿ ವಾಟಾಳ್ ನಾಗರಾಜ್ ವಿನೂತನವಾಗಿ ಧರಣಿ ನಡೆಸಿದ್ದಾರೆ.ಅಷ್ಟೇ ಅಲ್ಲದೇ ಹಿಂದಿ ಬೇಡವೇ ಬೇಡ ಕನ್ನಡ ಬಿಟ್ಟು ಇತರೆ ಯಾವುದೇ ಭಾಷೆಯು ಬೇಡ .ಕರ್ನಾಟಕದಲ್ಲಿ ಕನ್ನಡ ಚಿತ್ರ ಮಾತ್ರ ಪ್ರದರ್ಶನವಾಗಬೇಕು.ಕರ್ನಾಟಕದಲ್ಲಿ ಕನ್ನಡಿಗರಿಗೆ   ಮಾತ್ರ ಉದ್ಯೋಗ ಹೆಚ್ಚು ಕೊಡಬೇಕು.ನ್ಯಾಯಲಯಗಳಲ್ಲಿ ಕಾರ್ಯ ಕಲಾಪಗಳು ಕನ್ನಡದಲ್ಲಿ ನಡೆಯಬೇಕು.ಸರ್ಕಾರದ ಎಲ್ಲಾ ಇಲಾಖೆಗಳು ಕನ್ನಡದಲ್ಲೇ ಎಲ್ಲಾ ವ್ಯವಹಾರ ನಡೆಸಬೇಕು .ಕನ್ನಡ ಮಾದ್ಯಮ ಶಾಲೆಗಳಿಗೆ ಮೊದಲ ಆದ್ಯತೆ ನೀಡಬೇಕು.ಕರ್ನಾಟಕಕ್ಕೆ ಕೇಂದ್ರ ಮಂತ್ರಿ ಬರ್ಲಿ ವಿದೇಶದ ಮಂತ್ರಿ ಬರ್ಲಿ ಕಾರ್ಯಕ್ರಮ ಕನ್ನಡದಲ್ಲೇ ನಡೆಯಬೇಕು ಹೀಗೆ ಸಾಲು ಸಾಲು ಬೇಡಿಕೆಯನಿಟ್ಟುಕೊಟ್ಟು ಹಿಂದಿ ದಿವಸ್ ವಿರೋಧಿಸಿ ವಾಟಾಳ್ ನಾಗರಾಜ್ ಭೂತದಹನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ