ವಿದ್ಯಾರ್ಥಿ ‌ಲಯಸ್ಮೀತಾ ಕೊಲೆ ಪ್ರಕರಣದಲ್ಲಿ ಚುರುಕುಗೊಂಡ ತನಿಖೆ

ಬುಧವಾರ, 4 ಜನವರಿ 2023 (19:03 IST)
ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ‌ಲಯಸ್ಮೀತಾ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ .ಪೊಲೀಸರು ತನುಖೆ ಚುರುಕುಗೊಳಿಸಿದ್ದಾರೆ. ಇನ್ನೂ ಯುವತಿಯನ್ನ ಹತ್ಯೆ ಮಾಡಿ ತಾನೂ ಕೂಡ ಆತ್ಮಹತ್ಯೆ ಗೆ ಯತ್ನಿಸಿದ ಪಾಗಲ್‌ಪ್ರೇಮಿ ಪವನ್ ಕಲ್ಯಾಣ್. ಪ್ರಾಣಾಯಾದಿಂದ ಪಾರಾಗಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಮುಂದುವರಿಯುತ್ತಿದೆ, 
ಎದೆ ಮೇಲೆ ಚಾಕು ಇರಿದುಕೊಂಡಿದ್ದರಿಂದ  ವೈದ್ಯರಿಂದ ಆಪರೇಷನ್ ಕೂಡ ಮಾಡಲಾಗಿತ್ತು ಅಲ್ದೆ  ಹೃದಯದ ಭಾಗಕ್ಕೆ ತಾಗದಿದ್ದದ್ದೇ  ಬಚಾವಾಗಿದ್ದಾನೆ ಕೈ ಕೊಯ್ದುಕೊಂಡಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು,ಇಂದು ಹೇಳಿಕೆ ಪಡೆಯುವ ಸಾಧ್ಯತೆಯಿದೆ.ಇನ್ನೂ ಈ‌ ಆರೋಪಿ ಪವನ್ ಕಲ್ಯಾಣ್ ಮೃತ ಯುವತಿಯ ಸಂಬಂಧಿಕನಾಗಿದ್ದು, ಯುವತಿ ಜೊತೆ ಓಡಾಡದಂತೆ ಪೋಷಕರು ವಾರ್ನ್ ಸಹ ಮಾಡಿದ್ದಾರಂತೆ , ಆದ್ರೂ ಯುವತಿ ಹಿಂದೆ ಆರೋಪಿ ಪವನ್ ಓಡಾಡ್ತಿದ್ದ. ಸದ್ಯ ಆರೋಪಿ ಪೋಷಕರನ್ನ ಭೇಟಿಗೆ ಬಿಟ್ಟಿಲ್ಲ..
ಕಾಲೇಜಿನ ಆಡಳಿತ ಮಂಡಳಿ ಬಳಿಯೂ ಘಟನೆ ಬಗ್ಗೆ ಮಾಹಿತಿ ಪಡೆಯಲಿದ್ದೇವೆ..ತನಿಖೆ ನಡೆಸಲಾಗ್ತಿದೆ..ಆರೋಪಿ ಹೇಳಿಕೆ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ.. ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ರು.
 
 ಯುವತಿಯ ಹತ್ಯೆಗೆ ಮೊದಲೇ ಪ್ಲಾನ್ ಮಾಡಿದ್ದ ಆರೋಪಿ ಕಾಲೇಜಿನ ಬಳಿ ಹೋಗಿ ಕ್ಯಾಂಪಸ್ ನಲ್ಲಿ 40 ನಿಮಿಷ ಕಾದಿದ್ದ ,ಆ ಬಳಿಕ ಕ್ಲಾಸ್ ರೂಮ್ ಬಳಿಯೇ ಹೋಗಿ ಲಯಸ್ಮಿತಳಾನ್ನ ಹೊರಗೆ ಕರೆತಂದು 15 ನಿಮಿಷ ಮಾತುಕತೆ ನಡೆಸಿದ್ದ . ಮತ್ತೆ ಕ್ಲಾಸ್ ರೂಮ್ ಒಳಗೆ ಹೋಗಿದ್ದ ಯುವತಿ ಬ್ಯಾಗ್ ತೆಗೆದುಕೊಂಡು ಹೊರ ಬಂದಿದ್ಲು. ಇದೇ ಸಮಯದಲ್ಲಿ ಐದು ನಿಮಿಷದ ಅಂತರದಲ್ಲಿ ಯುವತಿಯನ್ನ ಬಿಡದೆ ನೇರವಾಗಿ ಹೃದಯಭಾಗಕ್ಕೆ ಬಲವಾಗಿ ಐದು ಬಾರಿ ಎದೆಯ ಭಾಗಕ್ಕೆ ಇರಿದಿದ್ದು,ತೀವ್ರ ರಕ್ತಸ್ರಾವ..ಸ್ಥಳದಲ್ಲೇ ಮೃತ ಪಟ್ಟಿದ್ದಳು.ಎದೆಯ ಮೇಲೆ ದೊಡ್ಡದಾಗಿ ಲಯಸ್ಮಿತ ಎಂದು ಹಾರ್ಟ್ ಸಿಂಬಲ್ ಹಾಕಿಸಿ ಅದರೊಳಗೆ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ ಆರೋಪಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ