ಶಿರೂರು ಮೂಲಮಠದಲ್ಲಿ ಎಸ್ ಪಿ ಯಿಂದ ತನಿಖೆ
ಮಂಗಳವಾರ, 24 ಜುಲೈ 2018 (14:09 IST)
ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹಿರಿಯಡ್ಕ ಸಮೀಪದಲ್ಲಿರುವ ಶಿರೂರು ಮೂಲ ಮಠಕ್ಕೆ ತೆರಳಿ ತನಿಖೆ ನಡೆಸಿದ್ದಾರೆ .
ಸ್ವಾಮೀಜಿ ಸಾವಿನ ಪ್ರಕರಣದ ತನಿಖೆಯು ಎಸ್ಪಿ ನಿರ್ದೇಶನದಲ್ಲಿ ಮುಂದುವರೆಯುತ್ತಿದ್ದು , ಈ ಹಿನ್ನೆಲೆಯಲ್ಲಿ ಅವರು ಮೂಲಮಠಕ್ಕೆ ಭೇಟಿ ನೀಡಿದ್ದಾರೆನ್ನಲಾಗಿದೆ . ಮಠದ ಕೆಲವೊಂದು ಕೋಣೆಗಳಿಗೆ ತೆರಳಿ ಪರಿಶೀಲನೆ ನಡೆಸಿರುವ ಎಸ್ಪಿ , ಸಿಸಿ ಕ್ಯಾಮೆರಾ ಹಾಗೂ ಡಿವಿಆರ್ ಸಂಬಂಧ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ . ಅಲ್ಲದೆ ಮಠಕ್ಕೆ ಸಂಬಂಧಿಸಿದವರನ್ನು ಕೂಡ ಅವರು ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ .
ಎಸ್ ಪಿ ಹೇಳಿದ್ದೇನು?
ಶಿರೂರು ಸ್ವಾಮೀಜಿಗೆ ಮಹಿಳೆಯೊಬ್ಬರು ವಿಷ ಉಣಿಸಿ ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು , ನಾವು ಈವರೆಗೆ ಯಾವುದೇ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿಲ್ಲ ಹಾಗೂ ವಿಚಾರಣೆ ಮಾಡಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ .
ಶಿರೂರು ಮೂಲ ಮಠದಲ್ಲಿರುವ ಸಿಸಿ ಕ್ಯಾಮೆರಾದ ಡಿವಿಆರ್ ನಾಪತ್ತೆಯಾಗಿರುವ ವಿಚಾರವನ್ನು ನಿರಾಕರಿಸಿರುವ ಎಸ್ಪಿ ಲಕ್ಷ್ಮಣ ನಿಂಬರಗಿ , ಸ್ವಾಮೀಜಿಯ ಸಾವಿಗೆ ಸಂಬಂಧಿಸಿ ಹರಡುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ.
ಆ್ಯಪ್ನಲ್ಲಿ ವೀಕ್ಷಿಸಿ x