ಶೀರೂರು ಸ್ವಾಮೀಜಿ ಪ್ರಕರಣ: ಕೇಮಾರು ಶ್ರೀ ಹೋರಾಟಕ್ಕೆ ಕಾಣದ ಕೈಗಳ ತಡೆ?

ಮಂಗಳವಾರ, 24 ಜುಲೈ 2018 (13:44 IST)
ಶಿರೂರು ಸ್ವಾಮೀಜಿಯ ಅಸಹಜ ಸಾವು ಪ್ರಕರಣ ದಿನೇ ದಿನೇ  ಕೆಲವು ರೋಚಕತೆಯ ಸುಳಿಯತ್ತ ಕೊಂಡೊಯ್ಯುತ್ತಿದೆ. ಶಿರೂರು ಸ್ವಾಮೀಜಿಯ ಅಸಹಜ ಸಾವು ಪ್ರಕರಣ ಯಾವುದೇ ತನಿಖೆ ಇಲ್ಲದೇ ಪ್ರಕರಣ ಮುಚ್ಚಿ ಹೋಗ್ತಾ ಇತ್ತು. ಆದ್ರೆ ಇದೇ ಸಂದರ್ಭ ಕೇಮಾರು ಸ್ವಾಮೀಗಳು  ಪ್ರವೇಶಿಸಿ ಶಿರೂರು ಶ್ರೀಗಳ ಸಾವು ಸಹಜ ಸಾವು ಅನ್ನಲು ಮನಸ್ಸು ಒಪ್ಪುತ್ತಿಲ್ಲ. ಪ್ರಕರಣದ ತನಿಖೆ ನಡೆಸಬೇಕು ಎಂದು ಕೇಮಾರು ಶ್ರೀಗಳು ಒತ್ತಡ ಹೇರಿದ್ದು, ಇದರ ಪರಿಣಾಮ ಶಿರೂರು ಶ್ರೀಗಳ ಸಾವಿನ ನಿಜವಾದ ಕಾರಣ ಬಯಲಾಯಿತು.  ನಿರಂತರ ಹೋರಾಟದಲ್ಲಿ ಧುಮುಕಿರುವ  ಕೇಮಾರು ಸ್ವಾಮೀಜಿಗಳು, ಶ್ರೀಗಳ ಸಾವಿಗೆ ನ್ಯಾಯ ಸಿಗಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಮದ್ಯೆ ಯಾವುದೇ ಒಂದು ವರ್ಗದ ಕಾಣದ ಕೈಗಳು ಕೇಮಾರು ಸ್ವಾಮೀಜಿಗಳ ಹೋರಾಟಕ್ಕೆ ತಡೆ ಒಡ್ಡುತ್ತಿದೆ ಎನ್ನಲಾಗುತ್ತಿದೆ.

ಸಾಮಾಜಿಕ ಜಾಲ ತಾಣದಲ್ಲಿ ಕೇಮಾರು ಸ್ವಾಮೀಜಿಗಳ ವಿರುದ್ಧ ನಿಂದನೆಯ ಪೋಸ್ಟ್ ಗಳನ್ನು ಶೇರ್ ಮಾಡಿ ಸ್ವಾಮೀಜಿಯ ಹೋರಾಟವನ್ನು ಹತ್ತಿಕ್ಕಲು ಮುಂದಾಗುತ್ತಿದೆ. ಶಿರೂರು ಶ್ರೀಗಳ ನಿಗೂಢ ಸಾವಿನ ವಿಚಾರದಲ್ಲಿ ಕೇಮಾರು ಸ್ವಾಮೀಜಿಗಳು ಯಾರ ಮೇಲೂ ಆರೋಪ ಹೊರಿಸಿಲ್ಲ. ಅದರಲ್ಲೂ ಮಠಾಧೀಶರಿಗೆ, ಹಿರಿಯರು ಎನಿಸಿರುವ ಪೇಜಾವರ ಶ್ರೀಗಳ ವಿರುದ್ಧ ಆರೋಪವನ್ನೇ ಮಾಡಿಲ್ಲ. ಆದ್ರೂ ಕೂಡಾ ಸಾಮಾಜಿಕ ಜಾಲ ತಾಣದಲ್ಲಿ ಪೇಜಾವರ ಹಿರಿಯ ಶ್ರೀಗಳ ಮೇಲೆ ಆರೋಪ ಹೊರಿಸಿರುವುದಾಗಿ ಪೇಜಾವರ ಶಿಷ್ಯನೊಬ್ಬ ಕೇಮಾರು ಶ್ರೀಗಳ ವಿರುದ್ಧ ಪೋಸ್ಟ್ ಶೇರ್ ಮಾಡಿದ್ದಾನೆ.

ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಬಗ್ಗೆ ಕೇಮಾರು ಶ್ರೀಗಳು ಭಾರೀ ಅಸಮಾಧನ ವ್ಯಕ್ತ ಪಡಿಸಿದ್ದಾರೆ. ಶಿರೂರು ಶ್ರೀಗಳ ನಿಗೂಡ ಸಾವಿನ ರಹಸ್ಯ ಬಯಲು ಮಾಡಲು ಹೋರಾಟ ನಡೆಸುತ್ತಿರುವ ನನ್ನನ್ನು ಧಮನ ಮಾಡಲು ಕೆಲವೊಂದು ಪಟ್ಟ ಭದ್ರ ಹಿತಾಶಕ್ತಿಗಳು ಪ್ರಯತ್ನ ನಡೆಸುತ್ತಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ