ಶೀರೂರು ಸ್ವಾಮೀಜಿ ಸಾವು ಪ್ರಕರಣ: ರಮ್ಯಾ ಶೆಟ್ಟಿ ಬಂಧನ
ಈ ಮೊದಲು ರಮ್ಯಾ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು ನಂತರ ಹೋಗಲು ಅನುಮತಿ ನೀಡಿದ್ದರು. ಆದರೆ ಇದೀಗ ಮತ್ತೆ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಬಳಿ ರಮ್ಯಾ ಶೆಟ್ಟಿ ಹಾಗೂ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ರಮ್ಯಾ ಶೆಟ್ಟಿ ಹಾಗೂ ಅವರ ಜತೆಗಿದ್ದ ಮೂವರು ಮಹಿಳೆಯರು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಕಾಪು ಪೊಲೀಸರ ವಶಕ್ಕೆ ನೀಡಿದ್ದಾರೆ.